ಕೊಡಗಿನ ಪ್ರಾಕ್ರತಿಕ ವಿಕೋಪ ಸಂತ್ರಸ್ಥ ನಿರುದ್ಯೋಗಿಗಳಿಗೆ ಬೆಂಗಳೂರಿನ ಸಮರ್ಥ ಭಾರತ ಸಂಘಟನೆಯಿಂದ ಉದ್ಯೋಗ ವ್ಯವಸ್ಥೆ

ಕೊಡಗಿನ ಪ್ರಾಕ್ರತಿಕ ವಿಕೋಪ ಸಂತ್ರಸ್ಥ ನಿರುದ್ಯೋಗಿಗಳಿಗೆ ಬೆಂಗಳೂರಿನ ಸಮರ್ಥ ಭಾರತ ಸಂಘಟನೆಯಿಂದ ಉದ್ಯೋಗ ವ್ಯವಸ್ಥೆ

81
0
SHARE

Post by :Sandeep Shanivarasanthe

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿರುವ ಪ್ರಾಕ್ರತ್ತಿಕ ವಿಕೋಪದಿಂದ ಸಂತ್ರಸ್ಥರಾಗಿರುವ ಬಂಧುಗಳಿಗೆ ಕಳೆದ ವಾರವಷ್ಟೆ ಪರಿಹಾರ ಸಾಮಾಗ್ರಿಗಳನ್ನು ನೀಡಿ ಹಿಂದುರುಗಿರುವ ಬೆಂಗಳೂರಿನ *ಸಮರ್ಥ ಭಾರತ* ಸಂಘಟನೆ ಇದೀಗ ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಮಾಡಲಿಚ್ಚಿಸುವ ಕೊಡಗಿನ ಸಂತ್ರಸ್ಥ ಕುಟುಂಬದ ಸದಸ್ಯರಿಗೆ ಉದ್ಯೋಗದ ವ್ಯವಸ್ಥೆ ಮಾಡಿರುತ್ತದೆ. ಅತಿವ್ರಷ್ಟಿಯಿಂದ ತಮ್ಮೆಲ್ಲಾ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿರುವ ಕೊಡಗಿನ ಜನತೆಗೆ ತಮ್ಮಿಂದಾಗುವ ಸೇವೆ ಮಾಡಬೇಕೆನ್ನುವ ಸದುದ್ದೇಶದೊಂದಿಗೆ ಮೂಲತಃ ಕೊಡಗಿನವರಾದ ಬೆಂಗಳೂರಿನ ನಿವಾಸಿ ಯಂ.ಜಿ. ಪ್ರೇಮಾನಂದ್ ರವರು ಬೆಂಗಳೂರಿನ ಸಮರ್ಥ ಭಾರತ ಸಂಘಟನೆಯ ನೇತ್ರತ್ವದಲ್ಲಿ ಮುಂದಡಿಯಿಟ್ಟಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಉದ್ಯೋಗ ಮಾಡಲಿಚ್ಚಿಸುವ ಕೊಡಗಿನ ಅರ್ಹ ವಿದ್ಯಾವಂತ/ ಅವಿದ್ಯಾವಂತ ನಿರುದ್ಯೋಗಿಗಳಿಗೂ ಅವರವರ ಅರ್ಹತೆಯ ಆಧಾರದಲ್ಲಿ ಆಯ್ಕೆಗಳಿದ್ದು ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ತಮ್ಮ ಮುಂದಿನ ಬದುಕನ್ನು ಸ್ವಾಭಿಮಾನದಿಂದ ಕಳೆಯುವಂತಾಗಲು ಸಮರ್ಥ ಭಾರತ ಬಯಸುತ್ತದೆಂದು ಪ್ರೇಮಾನಂದ್ ತಿಳಿಸಿದರು. ಬೆಂಗಳೂರಿಗೆ ಆಗಮಿಸಿ ಉದ್ಯೋಗ ಮಾಡಬಯಸುವವರಿಗೆ ಅಗತ್ಯವಿದ್ದಲ್ಲಿ ಗರಿಷ್ಠ ಮೂರು ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಯನ್ನು ಸಮರ್ಥ ಭಾರತ ಸಂಘಟನೆಯ ವತಿಯಿಂದ ಒದಗಿಸಲಾಗುವುದೆಂದು ಪ್ರೇಮಾನಂದ್ ಮಾಹಿತಿ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ *ಮಾಹಿತಿಗಳಿಗಾಗಿ*: ಯಂ.ಜಿ. ಪ್ರೇಮಾನಂದ್ ಬೆಂಗಳೂರು ಮೊ:9845448571. ಅಥವಾ ಕುಮಾರ್ ಕೂರ್ಗ್ ಮೊ:9845178711. ಇವರುಗಳನ್ನು ಸಂಪರ್ಕಿಸಲು ಕೋರಿದೆ. .

ಬಂಧುಗಳೇ ನಿಮ್ಮೊಂದಿಗೆ ನಾವಿದ್ದೇವೆ. ಸಮರ್ಥ ಭಾರತ

NO COMMENTS

LEAVE A REPLY