ಮರೆಯಾಗುತ್ತಿವೆ ಮುದ್ದು ಗುಬ್ಬಚ್ಚಿಗಳು

  57
  0
  SHARE

  ಮರೆಯಾಗುತ್ತಿವೆ ಮುದ್ದು ಗುಬ್ಬಚ್ಚಿಗಳು

  ಗುಬ್ಬಚ್ಚಿ ಗಾತ್ರದಲ್ಲಿ ಚಿಕ್ಕದಾದ ಸುಂದರವಾದ ಒಂದು ಪಕ್ಷಿ. ಗುಂಪು-ಗುಂಪಾಗಿ ಎಲ್ಲಿ ನೋಡಿದರಲ್ಲಿ ಕಣ್ಣಿಗೆ ಬೀಳುವ ಯಾವಾಗಲು ಒಗ್ಗಟ್ಟಿನಿಂದ ಜನರ ಮಧ್ಯೆಯೇ ಬದುಕುವುದು ಈ ಜೀವಿ ಸಹಜ ಗುಣ.

  ಈ ನಡುವೆ ಗುಬ್ಬಿಗಳು ಕಣ್ಮಾರೆಯಾಗುತ್ತಿವೆ, ಊರಿನ ಪ್ರತಿ ಬೀದಿ ಬೀದಿಯಲ್ಲೂ ಕಾಣಿಸಿ ಕೋಳ್ಳುತ್ತಿದ್ದ ಈ ಪಕ್ಷಿಗಳ ಗುಂಪು ದಿನೇ ದಿನೇ ಅವನತಿಯತ್ತ ಸಾಗುತ್ತಿದೆ. ಗುಬ್ಬಿಗಳು ಅತ್ಯಂತ ಸೂಕ್ಷ್ಮ ಸ್ವಾಭಾವದ ಜೀವಿಗಳು. ಅಕ್ಕಿ, ರಾಗಿ, ಹುಳ, ಗೆದ್ದಲು ಹುಳುಗಳನ್ನು ತಿಂದು ಬದುಕುತ್ತವೆ. ಹಾಗೂ ಗೂಡು ಕಟ್ಟಿ ವಾಸಿಸುವ ಇವು ಮನೆಯ ಗೋಡೆಗಳ ಮೇಲೆ ಎಲ್ಲಿ ನೋಡಿದರೆ ಅಲ್ಲಿ ಗೂಡು ಕಟ್ಟಿ ತಮ್ಮ ಸಂತಾನೋತ್ಪತ್ತಿ ಮಾಡುತ್ತವೆ. ವರ್ಷಕ್ಕೆ 3/4 ಮೊಟ್ಟೆ ಇಡುವ ಈ ಪಕ್ಷಿ ವರ್ಷಕ್ಕೆ ಅನೇಕ ಬಾರಿ ಮೊಟ್ಟೆ ಇಟ್ಟು ತನ್ನ ಸಂತಾನವನ್ನು ಬೆಳೆಸುತ್ತದೆ.
  ಗುಬ್ಬಿಗಳ ಕಾಲು ಅತ್ಯಂತ ತೇಳುವಾಗಿರುವ ಕಾರಣ ಅವು ತಮ್ಮ ಭಾರವನ್ನು ಹೋತ್ತು ನಡೆಯಲಾರವು ಆದ್ದರಿಂದ ನಡೆಯುವುದಕ್ಕಿಂತ ಹೆಚ್ಚು ಜಿಗಿಯುವ ಅಥವ ಹಾರುತ್ತ ಸಂಚರಿಸುತ್ತವೆ.

  ಆದರೆ ಇತ್ತೀಚಿನ ವರದಿ ಪ್ರಕಾರ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳಲ್ಲಿ ಗುಬ್ಬಿಯು ಸಹ ಒಂದಾಗಿದೆ. ಅವುಗಳು ನಾಶದ ಅಂಚಿನಲ್ಲಿದ್ದು ಮುಂದಿನ ದಿನಗಳಲ್ಲಿ ಅವುಗಳು ಕಾಣಸಿಗುವುದು ಕಷ್ಟವಾಗುತ್ತದೆ.

  ಗುಬ್ಬಿಗಳು ಕಾಣೆಯಾಗಲು ಕಾರಣ:
  ಗುಬ್ಬಿಗಳು ಈ ನಡುವೆ ಬೇಗ ಕಣ್ಮಾರೆಯಾಗಳು ಅನೇಕ ಕಾರಣಗಳು ಇದ್ದರು ಇವುಗಳ ನಾಶಕ್ಕೆ ಬಹು ಮುಖ್ಯ ಕಾರಣ ವೇನಿಸುವುದು.

  1) ಮರಗಳನ್ನು ಕಡಿದು ನಾಶಮಾಡಿ ಮರಗಳಿದ್ದ ಜಾಗದಲ್ಲಿ ಎತ್ತರದ ಕಟ್ಟಡಗಳು ತಲೆ ಎತ್ತಿರುವುದು ಗುಬ್ಬಿಗಳಿಗೆ ಗೂಡುಕಟ್ಟಲು ಸರಿಯಾದ ಜಾಗ ಸಿಗುತ್ತಿಲ್ಲ & ಅವುಗಳಿಗೆ ನೆರಳಿನ ವಾತವರಣ ಸಿಗುತ್ತಿಲ್ಲವಾದ ಕಾರಣ ಅವುಗಳ ಸಂತಾನ ಪ್ರಕ್ರಿಯೆ ತೀರ ಕಡಿಮೆಯಾಗಿದೆ.

  2)ಅತೀಯಾದ ಪೋನ್ ಗೋಪುರಗಳ ಸಂಖ್ಯೆಯಿಂದ ಅವುಗಳಿಂದ ಹೊರಬರುವ ವಿಕಿರಣಗಳಿಗೆ ಸಿಲುಕಿ ಇಂದು ಅನೇಕ ಗುಬ್ಬಚ್ಚಿಗಳು ನಾಶವಾಗಿವೆ.

  3) ಜಮೀನಲ್ಲಿ ರಾಸಯನಿಕಗಳ ಬಳಕೆ ಹೆಚ್ಚಾಗಿದ್ದು ಹೊಲಗಳಲ್ಲಿ ಗುಬ್ಬಿಗಳಿಗೆ ಆಹಾರವಾಗಿದ್ದ ಹುಳುಗಳು ಸೀಗುತ್ತಿಲ್ಲ ಇನ್ನು ಧವಸ ಧಾನ್ಯಗಳನ್ನು ಬೆಳೆಯುವುದೇ ಕಡಿಮೆಯಾಗಿರುವ ಈ ಕಾಲದಲ್ಲಿ ಅವುಗಳನ್ನು ಚೆಲ್ಲಿ ಪಕ್ಷಿಗಳಿಗೆ ಆಹಾರ ನೀಡುವ ಮನಸ್ಸು ಸಹಾ ಯಾರಿಗು ಬರುತ್ತಿಲ್ಲ, ಇದರಿಂದ ಆಹಾರ ಸಮಸ್ಯೆ ಹೆಚ್ಚಾಗಿ ಅವುಗಳು ವಿನಾದ ಆದಿಯಲ್ಲಿ ಸಾಗುವಂತಾಗಿದೆ.

  ಅತ್ಯಂತ ಪ್ರಮಾಣದಲ್ಲಿ ಕಾಣಸಿಗುತ್ತಿದ್ದ ಗುಬ್ಬಿಗಳು ಇಂದು ಮಾನವನ ಆಧುನೀಕರಣದಿಂದ ಅವುಗಳ ವಿನಾಶಕ್ಕೆ ನಾಂದಿಯಾಗುತ್ತಿದೆ. ಇಂದು ಬೆರಳೆಣಿಕೆಯಲ್ಲಿ ಗುಬ್ಬಿಗಳು ಕಾಣುತ್ತಿದ್ದು ಅವುಗಳನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ. ಈ ಕಾರಣ ನಾವು ನಮ್ಮ ಮನೆಯ ಮೇಲೆ ಅಥವ ಅಕ್ಕ-ಪಕ್ಕ ಧಾನ್ಯಗಳನ್ನು ಚೆಲ್ಲುವ ಮೂಲಕ ಅವುಗಳ ಆಹಾರದ ಸಮಸ್ಯೆಯನ್ನು ಸ್ವಲ್ಪ ನೀಗಿಸಿದರೆ ಮತ್ತು ಅವುಗಳು ಗೂಡು ಕಟ್ಟಲು ಸ್ಥಳ ವ್ಯವಸ್ಥ ಮಾಡಿದರೆ ಅವುಗಳನ್ನು ಉಳಿಸಿ ಕೋಳ್ಳಬಹುದಾಗಿದೆ.

  “ನಾವು ಶಾಲೆಗೆ ಹೋತ್ತಿದ್ದ ಸಮಯದಲ್ಲಿ ಗುಂಪು ಗುಂಪಾಗಿ ಕಾಣಿಸಿಕೋಳ್ಳುತ್ತಿದ್ದ ಗುಬ್ಬಿಗಳು ಇಂದು ಕಣ್ಮರೆಯಾಗುತ್ತಿದ್ದಾವೆ. ಅವುಗಳ ಉಳಿವಿಗಾಗಿ ಇಂದು ಜನಜಾಗೃತಿ ಮೂಡಿಸಿ ಬೇಕಾದ ಫೋನಿನ ಗೋಪುರಗಳಿಂದ ಹಾನಿಗೋಳಗಾಗ ಈ ಸಂತತಿಯ ಉಳಿವಿಗಾಗಿ ಫೋನಿನ ಗೋಪುರಗಳ ಉನ್ನತ ಮಟ್ಟದ ನಿರ್ವಹಣೆ ಅಗತ್ಯ ಎನಿಸುತ್ತದೆ.”

  – ಪವನ್ ಕುಮಾರ್
  ಚಿತ್ರ– ಅನಿಲ್ ಎ,ಎಸ್ (ವನ್ಯಜೀವಿ ಛಾಯಾಗ್ರಹಕ)  ಪತ್ರಿಕೋಧ್ಯಮ ವಿದ್ಯಾರ್ಥಿಗಳು
  ಮಾನಸಗಂಗೋತ್ರಿ ಮೈಸೂರು.

  NO COMMENTS

  LEAVE A REPLY