ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ: ಒಬ್ಬನಿಗೆ ಗಂಭೀರ ಗಾಯ

ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ: ಒಬ್ಬನಿಗೆ ಗಂಭೀರ ಗಾಯ

178
0
SHARE

ಮೈಸೂರು (ಸೆ.03.2018): ಚಲಿಸುತ್ತಿದ್ದ ಕಾರು ಮತ್ತು ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೈಸೂರಿನ ಕೆಎಮ್ಎಫ್    (ಕರ್ನಾಟಕ ಮಿಲ್ಕ್ ಫೆಡರೇಷನ್) ಡೈರಿ ಬಳಿ ಅಪಘಾತ ಸಂಭವಿಸಿದೆ.

ನಜರ್ ಬಾದ್ ಮಾರ್ಗವಾಗಿ ಬನ್ನೂರು ಕಡೆಗೆ ಚಲಿಸುತ್ತಿದ್ದ ಡಸ್ಟರ್ ಕಾರಿಗೆ ಹೊಂಡಾ ಆಕ್ಸಿಸ್ ಸ್ಕೂಟರ್ ಚಾಲಕ ರಸ್ತೆಗುಂಡಿ ತಪ್ಪಿಸಲು ಯತ್ನಿಸಿ ಕಾರಿಗೆ ಡಿಕ್ಕಿಹೊಡೆದದ್ದು ಅಪಘಾತಕ್ಕೆ ಕಾರಣವೆಂಬುದು ಸ್ಥಳಿಯರು ಹೇಳಿಕೆಯಾಗಿದೆ.

ಸದ್ಯದ ಸ್ಥಿತಿಯಲ್ಲಿ ಪ್ರಾಣಪಾಯದಿಂದ ಪಾರಗಿದ್ದು, ಸ್ಕೂಟರ್ ನಲ್ಲಿದ್ದ ಮೂವರಲ್ಲಿ ಒಬ್ಬನಿಗೆ ಸ್ಥಳದಲ್ಲೇ ಕಾಲು ಮುರಿದು ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯವಾಗಿದೆ.

ಮೈಸೂರು ಹಾಗೂ ಬನ್ನೂರು ಮಾರ್ಗದ ರಸ್ತೆಯಲ್ಲಿ ಬಹುತೇಕ ರಸ್ತೆಗುಂಡಿ ಇರುವುದರಿಂದ ದಿನೆ ದಿನೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

-ವರದಿ: ನರೇಂದ್ರ ದೇವಯ್ಯ

NO COMMENTS

LEAVE A REPLY