4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ ಟೆಸ್ಟ್...

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ ಟೆಸ್ಟ್ ಕ್ರಿಕೆಟ್ ನ 15 ಶತಕ ಸಿಡಿಸಿದ ಪೂಜಾರಾ, 210 ಎಸೆತಗಳಲ್ಲಿ 101 ರನ್ ಸಿಡಿಸಿದ ಬಲಗೈ ಬ್ಯಾಟ್ಸಮನ್

85
0
SHARE

 

ಸೌಥ್ಯಾಂಪ್ಟನ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿದ್ದಾರೆ.
ಭಾರತೀಯ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ನಡುವೆಯೇ ಏಕಾಂಗಿ ಹೋರಾಟ ನಡೆಸಿದ ಪೂಜಾರ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಒಟ್ಟು 210 ಎಸೆತಗಳಲ್ಲಿ 101 ರನ್ ಸಿಡಿಸಿದ ಬಲಗೈ ಬ್ಯಾಟ್ಸಮನ್ ಪೂಜಾರಾ ತಮ್ಮ ಟೆಸ್ಟ್ ವೃತ್ತಿ ಜೀವನದ 15 ಶತಕ ಸಿಡಿಸಿದರು. ಪೂಜಾರ ಅವರ ಇನ್ನಿಂಗ್ಸ್ ನಲ್ಲಿ ಒಟ್ಟು 11 ಬೌಂಡರಿಗಳು ಸೇರಿದ್ದವು.
ಭಾರತಕ್ಕೆ ಅಲ್ಪ ಮುನ್ನಡೆ, ಮೊಯಿನ್ ಅಲಿ ದಾಳಿಗೆ ತತ್ತರಿಸಿದ ಭಾರತ
ಇನ್ನು ಇಂಗ್ಲೆಂಡ್ ತಂಡದ ಬೌಲರ್ ಮೊಯಿನ್ ಅಲಿ ದಾಳಿಗೆ ತತ್ತರಿಸಿದ ಭಾರತ ಈಗಾಗಲೇ 9 ವಿಕೆಟ್ ಕಳೆದುಕೊಂಡಿದೆ. ಆದರೂ ಪೂಜಾರಾ ಅವರ ಶತಕದ ನೆರವಿನಿಂದ ಭಾರತ ಅಲ್ಪ ಮುನ್ನಡೆ ಸಾಧಿಸಿದ್ದು, ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತ್ತು. ಅಂತೆಯೇ 24 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಪ್ರಸ್ತುತ 124 ರನ್ ಸಿಡಿಸಿರುವ ಪೂಜಾರ ಮತ್ತು ಜಸ್ ಪ್ರೀತ್ ಬುಮ್ರಾ ಆಟವಾಡುತ್ತಿದ್ದಾರೆ.

NO COMMENTS

LEAVE A REPLY