ಶ್ರೀಮತಿ ಸಿ ಶೋಭ ರಾಜೇಶ್ ರವರಿಂದ ನಾಮಪತ್ರ ಸಲ್ಲಿಕೆ

ಶ್ರೀಮತಿ ಸಿ ಶೋಭ ರಾಜೇಶ್ ರವರಿಂದ ನಾಮಪತ್ರ ಸಲ್ಲಿಕೆ

191
0
SHARE

ಆಗಸ್ಟ್ 31ರಂದು ಮೈಸೂರು ಮಹಾ ನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 64ನೇ(ಅರವಿಂದ ನಗರ) ವಾರ್ಡಿನಿಂದ ಸ್ಪರ್ಧಿಸಿರುವ ಶ್ರೀಮತಿ ಸಿ.ಶೋಭಾ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆದು , ಅಲ್ಲಿಂದ ಅರವಿಂದ ನಗರದಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನೂರಾರು ಮಂದಿಯೊಂದಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಲತಾ ಮೋಹನ್ ,ಲತಾ ರಂಗನಾಥ್, ರೂಪೇಶ್, ರಾಖೇಶ್ ಗೌಡ , ಶೋಭಾ ಅವರ ಪತಿ ರಾಜೇಶ್ ಸೇರಿದಂತೆ ವಾರ್ಡಿನ ನೂರಾರು ಮತದಾರರು , ಪಕ್ಷದ ಕಾರ್ಯಕರ್ತರು , ಮುಖಂಡರು , ಹಿತೈಷಿಗಳು ಪಾಲ್ಗೊಂಡು ಸಾಥ್ ನೀಡುವ ಮೂಲಕ ಶುಭ ಹಾರೈಸಿದರು.
ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು…

Post and photography: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY