ಕೊಡಗಿನಲ್ಲಿ ಮುಂದುವರಿದ ಮಳೆ, ಭೂ ಕುಸಿತ, ಮೂವರ ಸಾವಿನ ಶಂಕೆ; ಓರ್ವನಿಗೆ ಗಾಯ

ಕೊಡಗಿನಲ್ಲಿ ಮುಂದುವರಿದ ಮಳೆ, ಭೂ ಕುಸಿತ, ಮೂವರ ಸಾವಿನ ಶಂಕೆ; ಓರ್ವನಿಗೆ ಗಾಯ

186
0
SHARE

 

ಮಡಿಕೇರಿ/ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮಡಿಕೇರಿ ಮುತ್ತಪ್ಪ ದೇವಸ್ಥಾನ ಬಳಿಯಲ್ಲಿ ಭೂಕುಸಿತದಿಂದ ಮನೆ ನೆಲಕಚ್ಚಿದೆ. ಕಾಟಕೇರಿ ಗ್ರಾಮದಲ್ಲಿ ಭೂಕುಸಿತಗೊಂಡಿದ್ದು ಓರ್ವ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 200ಕ್ಕೂ ಅಧಿಕ ಮಂದಿ ಅಪಾಯದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಕಾಟಗೇರಿ ಗ್ರಾಮದಲ್ಲಿ ಭೂ ಕುಸಿತದಿಂದ ಯಶವಂತ್, ವೆಂಕಟರಮಣ, ಪವನ್ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಂದೂರಿನಲ್ಲಿ ಭೂಕುಸಿತದಿಂದ ಸಾವು ಸಂಭವಿಸಿರುವ ಸಾಧ್ಯತೆಯಿದೆ. ಮಣ್ಣಿನಡಿಯಲ್ಲಿ ಜನರ ಕೈ ಕಾಣಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜಿಲ್ಲಾಡಳಿತ ಜನತೆಯ ರಕ್ಷಣೆಗೆ ಹೆಲಿಕಾಪ್ಟರ್ ತರಿಸಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ಮತ್ತು ಹಾರಂಗಿ ಜಲಾಶಯವು ಸಂಪೂರ್ಣ ತುಂಬಿದೆ.

ಶಿರಾಡಿ ಘಾಟ್ ನಲ್ಲಿ ಸತತ ಭೂಕುಸಿತದಿಂದಾಗಿ ಸಂಚಾರಕ್ಕೆ ಅಪಾಯವಿರುವುದರಿಂದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರ ನಿಲ್ಲಿಸುವಂತೆ ಮಂಗಳೂರು ಜಿಲ್ಲಾಧಿಕಾರಿ ಶಶಿಕಾಂತ್ ಸೆಂತಿಲ್ ಆದೇಶ ನೀಡಿದ್ದಾರೆ.

ಕುಶಾಲನಗರ, ಮಡಿಕೇರಿ, ವಿರಾಜಪೇಟೆಯ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಡಿಕೇರಿ, ವಿರಾಜಪೇಟೆ, ಮಡಿಕೇರಿ, ಮಂಗಳೂರು, ಹಟ್ಟಿಹೊಳೆ, ಸೋಮವಾರಪೇಟೆಗಳಲ್ಲಿ ರಸ್ತೆಗಳು ನೀರು ತುಂಬಿ ಸಂಪರ್ಕ ಕಳೆದುಕೊಂಡಿವೆ.

ಕೇರಳದಲ್ಲಿನ ಪ್ರವಾಹ ಮಳೆ, ಕರ್ನಾಟಕದ ಕರಾವಳಿ, ಕೊಡಗು, ಮಲೆನಾಡಿನಲ್ಲಿ ಸತತ ಮಳೆಯಿಂದಾಗಿ ಪ್ರವಾಸೋದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿದೆ. ವಾರಾಂತ್ಯ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹೊರಗೆ ಹೋಗಿ ಕುಟುಂಬದವರು, ಸ್ನೇಹಿತರ ಜೊತೆ ರಜೆಯ ಮಜಾ ಸವಿಯಬೇಕೆಂದು ಅಂದುಕೊಂಡವರಿಗೆ ವರುಣ ಮುನಿಸು ತೋರಿದ್ದಾನೆ. ಮಳೆಗೆ ಹೊರಗೆ ಹೋಗಲಾರದೆ, ದೀರ್ಘ ಪ್ರಯಾಣ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಉಳಿದುಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು ಕೆಲವರು ಪ್ರಯಾಣ ಮಧ್ಯದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ

ವರದಿ: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY