ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೈಸೂರಿನಲ್ಲಿ ರೆಡಿಯಾಯ್ತು 480 ಕೆಜಿ ತೂಕದ ಕೇಕ್

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೈಸೂರಿನಲ್ಲಿ ರೆಡಿಯಾಯ್ತು 480 ಕೆಜಿ ತೂಕದ ಕೇಕ್

160
0
SHARE

 

ಮೈಸೂರು, ಆಗಸ್ಟ್ 15: 72ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಜನರಿಗೆ ಹಾಗೂ ಯುವಕರಿಗೆ ರಾಷ್ಟ್ರ ನಾಯಕರ ಸಾಧನೆ, ಹೋರಾಟದ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹಾಗೂ ಡಾಲ್ಫಿನ್ ಬೇಕರಿ ಗ್ರೂಪ್ ವಿಭಿನ್ನ ರೀತಿಯಲ್ಲಿ ತಿಳಿಸಲು ಪ್ರಯತ್ನಿಸಿದೆ.

ದೇಶ ಸೇವೆಗಾಗಿ ಮಡಿದ ರಾಷ್ಟ್ರೀಯ ನಾಯಕರ ಭಾವಚಿತ್ರವಿರುವ 480 ಕೆಜಿ ಗಾತ್ರದ ಕೇಕ್ ತಯಾರಿಸಿ ಅದನ್ನು ಪ್ರದರ್ಶನಕ್ಕಿಟ್ಟು ಸ್ವಾತಂತ್ರ ಹೋರಾಟದ ಬಗ್ಗೆ ತಿಳಿಯಪಡಿಸಲು ಮುಂದಾಗಿವೆ.ಮೈಸೂರು ಹೋಟೆಲ್ ಮಾಲೀಕರ ಸಂಘ ಹಾಗೂ ಡಾಲ್ಫಿನ್ ಬೇಕರಿ ಗ್ರೂಪ್ ಜೊತೆಗೂಡಿ 150 ಅಡಿ ಉದ್ದದ ಕೇಕ್ ತಯಾರಿಕೆ ಮಾಡಿದ್ದು, ನಗರದ ಕೃಷ್ಣ ಮೂರ್ತಿ ಪುರಂ ನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿಯಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ.
ಹಿರಿಯ ಸ್ವಾತಂತ್ರ್ಯ ಹೊರಾಟಗಾರರು ಕೇಕ್ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸುಮಾರು 2 ಲಕ್ಷ ವೆಚ್ಚದಲ್ಲಿ ಕೇಕ್ ಮಾಡಲಾಗಿದ್ದು, ಆರು ಜನ ಕಲಾವಿದರು ಎರಡು ದಿನಗಳ ಕಾಲ ಕೇಕ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
A3 ಅಳತೆಯ 40 , A4 ಅಳತೆಯ 80 ಫೋಟೋ ಪ್ರಿಂಟ್ ಗಳ ಬಳಕೆ ಮಾಡಲಾಗಿದೆ. ಈ ಕೇಕ್ ತಿನ್ನಲು ಬಳಸುವುದಿಲ್ಲ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ತಿಳಿಸಿದೆ

NO COMMENTS

LEAVE A REPLY