ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಈ ಮೂರನ್ನು ತಿದ್ದುವ ರಂಗ ಪತ್ರಿಕೋದ್ಯಮ…..

ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಈ ಮೂರನ್ನು ತಿದ್ದುವ ರಂಗ ಪತ್ರಿಕೋದ್ಯಮ…..

390
0
SHARE

 

ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಈ ಮೂರನ್ನು ತಿದ್ದುವ ರಂಗ ಪತ್ರಿಕೋದ್ಯಮ…..

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಸಾಧಕ ಪತ್ರಕರ್ತರಿಗೆ ಅಭಿನಂದಿಸುವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.


ಅರಮನೆ ನಗರಿಯ ರಾಜೇಂದ್ರ ಕಲಮಂದಿರದಲ್ಲಿ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.ನಂತರ ಪತ್ರಕರ್ತರಾದ ರಾಜಕುಮರ್ ಭಾವಸರ್, ಹನಗುಡು ನಟರಾಜ್, ನಿತಿನ್ ರಾಜ್, ಹಾಗೂ ಸುವರ್ಣ ವಾಹಿನಿ ಸಂಪಾದಕರಾದ ರವಿ ಹೆಗ್ಗಡೆ ರವರಿಗೆ ಸನ್ಮಾನಿಸಲಾಯಿತು.


ನಂತರ ಮಾತನಾಡಿದ ಜಿ ಟಿ ದೇವಗೌಡರು ನೇರ ದಿಟ್ಟ ಮಾತುಗಳು ಹಾಗೂ ಕಠಿಣವಾದ ಬರಹಗಳ ಮೂಲಕ ಜನರಿಗೆ ಹರಿವನ್ನು ಮೂಡಿಸುವ ಪತ್ರಕರ್ತರು ಸಮಾಜಕ್ಕೆ ಉನ್ನತವಾದ ಕೊಡುಗೆಯನ್ನು ಸಹ ನೀಡಿದ್ದಾರೆ. ಬಹಳಷ್ಟು ಸಣ್ಣ ಸಣ್ಣ ಪತ್ರಿಕೆ ನಗರಕಷ್ಟೇ ಸೀಮಿತವಾಗಿದ್ದವು ಆದರೆ ಈಗ ಜಿಲ್ಲೆ ಜಿಲ್ಲೆಗಳಲ್ಲೂ ಕೂಡ ಪ್ರಚಾರಗೊಂಡಿವೆ. ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಈ ಮೂರನ್ನು ತಿದ್ದುವ ರಂಗ ಪತ್ರಿಕರಂಗವಾಗಿದೆ ಅದರಿಂದ ಪತ್ರಕರ್ತರು ನ್ಯಾಯ ನಿಷ್ಠೆಯಿಂದ ಇರಬೇಕು ಎಂದರು. ಮೈಸೂರು ಜಿಲ್ಲೆಯೆನ್ನು ದೇಶದಲ್ಲೆ ಗಮನ ಸೆಳೆಯಲು ನಾವು ಶ್ರಮಿಸುತ್ತಿದ್ದೇವೆ. ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿ ಸೋಮವಾರ ಕಚೇರಿಯಲ್ಲಿ ಇರಬೇಕು ಎಂದರು.
ಇದೆ ಸಂದರ್ಭದಲ್ಲಿ ಖ್ಯಾತ ಪತ್ರಕರ್ತರಾದ ಪಟ್ಟಾಬಿ ರಾಮಣ್ಣ, ಸತ್ಯನಾರಾಯಣ, ಎಂ ಎನ್ ತಿಮ್ಮಯ್ಯ ಹೀಗೆ ಹಿರಿಯ ಪತ್ರಕರ್ತರನ್ನು ನೆನೆದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ ಕೆ ಮಹೇಂದ್ರ, ಪ್ರದಾನ ಕಾರ್ಯದರ್ಶಿಯಾದ ಲೋಕೇಶ್ ಬಾಬು, ಹುಣಸೂರು ಶಾಸಕರಾದ ಹೆಚ್.ವಿಶ್ವನಾಥ್, ಧರ್ಮಪುರ ನಾರಾಯಣ ಹಾಗೂ ಮೈಸೂರಿನ ಕೆಲ ಕಾಲೇಜಿನ ಪತ್ರಿಕೋದ್ಯಮ ವಿಧ್ಯಾರ್ಥಿಗಳು, ಮತ್ತಿತರಾರು ಉಪಸ್ಥಿತರಿದ್ದರು.

ವರದಿ ಮತ್ತು ಛಾಯಾಚಿತ್ರ: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY