ವಿ.ವಿ ಸಿಂಡಿಕೇಟ್ ಸದಸ್ಯರ ನೇಮಕ ರದ್ದು: ಆದೇಶ

ವಿ.ವಿ ಸಿಂಡಿಕೇಟ್ ಸದಸ್ಯರ ನೇಮಕ ರದ್ದು: ಆದೇಶ

340
0
SHARE

 

ವಿ.ವಿ ಸಿಂಡಿಕೇಟ್ ಸದಸ್ಯರ ನೇಮಕ ರದ್ದು: ಆದೇಶ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ 14 ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನವನ್ನು ಕೂಡಲೇ ಜಾರಿಗೆ ಬರುವಂತೆ ರದ್ದು ಮಾಡಿ ಉನ್ನತ ಶಿಕ್ಷಣ ಇಲಾಖೆ ಮಂಗಳವಾರ ಸಂಜೆ ಆದೇಶ ಹೊರಡಿಸಿದೆ.

ಹಿಂದಿನ ಸರ್ಕಾರದಲ್ಲಿ ನೇಮಕಗೊಂಡಿದ್ದವರ ನಾಮ ನಿರ್ದೇಶನವನ್ನು ಸಮ್ಮಿಶ್ರ ಸರ್ಕಾರ ಹಿಂಪಡೆದಿದೆ. 2013ರಲ್ಲಿ ಹೈಕೋರ್ಟ್‌ ಕೊಟ್ಟ ಆದೇಶದ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಕಳೆದ ಮಾರ್ಚ್ 15ರಂದು ಕವಿವಿ ಸಿಂಡಿಕೇಟ್‌ಗೆ 6 ಜನರನ್ನು ನೇಮಿಸಲಾಗಿತ್ತು.

ಪರಮೇಶ್ವರ ಕಾಳೆ, ಎಫ್‌.ಟಿ.ಭಾವಿಕಟ್ಟಿ, ರಾಧಾರಾಣಿ ಕೊಳಂಬೆ, ಸೈಯದ್ ಎನ್.ಖಾಜಿ, ಬಿ.ಎಂ.ಬಂಡಕ್ಕನವರ, ಶಂಕರಪ್ಪ ಸಿ.ಸಿಡೇನೂರ ಅವರ ನಾಮನಿರ್ದೇಶನ ರದ್ದಾದಂತಾಗಿದೆ.

ಗುಲಬರ್ಗಾ, ಶಿವಮೊಗ್ಗ, ಕರ್ನಾಟಕ ರಾಜ್ಯ ಮಹಿಳಾ ವಿವಿ, ತುಮಕೂರು ವಿವಿ, ದಾವಣಗೆರೆ ವಿವಿ, ರಾಣಿ ಚನ್ನಮ್ಮ ವಿವಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ, ಬೆಂಗಳೂರು ಉತ್ತರ ವಿವಿ, ಮಂಗಳೂರು ವಿವಿ, ಬೆಂಗಳೂರು ಕೇಂದ್ರ ವಿವಿ, ಮೈಸೂರು ವಿವಿ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೂ ಆದೇಶ ಅನ್ವಯಿಸಲಿದೆ ಎಂದು ತಿಳಿಸಲಾಗಿದೆ.

NO COMMENTS

LEAVE A REPLY