ಶಾಲಾ ಶಿಕ್ಷಕರ ಪರಿಸರ ಪ್ರೇಮ

ಶಾಲಾ ಶಿಕ್ಷಕರ ಪರಿಸರ ಪ್ರೇಮ

328
0
SHARE

 

ಮಾನವರಿಲ್ಲದೆ ಪ್ರಕೃತಿ ಉಳಿಯುತ್ತದೆ ಆದರೆ ಪ್ರಕೃತಿ ಇಲ್ಲದೆ ಮಾನವ ಉಳಿಯಲಾರ .
ಆಧುನಿಕ ಯುಗದಲ್ಲಿಯು ಸಾವಯವ ಪದ್ದತಿಯನ್ನು ಅನುಸರಿಸುತ್ತಾ ಈ ಪ್ರಕೃತಿಯ ಮಡಿಲಲ್ಲಿ ಹಲವರಿದ್ದಾರೆ. ಅಂತಹ ಪ್ರಕೃತಿ ಪ್ರಿಯರಲ್ಲಿ ಮೈಸೂರಿನ ಸದ್ವಿದ್ಯಾ ಶಾಲೆಯ ಶಿಕ್ಷಕರಾದ ಗಣೇಶ್ ಕೂಡ ಒಬ್ಬರು. ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ 25 ವರ್ಷದಿಂದ ದೇಶದಾದ್ಯಂತ 1000 ಕ್ಕೂ ಹೆಚ್ಚು ವಿಚಾರ ಸಂಕಿರಣ, ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದು ಅನೇಕ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಇವರು ಪಾಠ ಮಾಡುವ ಶಾಲೆಯಲ್ಲಿ 100 ಕ್ಕೂ ಹೆಚ್ಚು ಗಿಡಗಳುಳ್ಳ ಕೈತೋಟ ಮಾಡಿದ್ದಾರೆ.

ಕೇವಲ ಪರಿಸರ ಜಾಗೃತಿ ಮೂಡಿಸಿದರೆ ಸಾಲದು ಅದನ್ನು ಮೊದಲು ತಾವು ಅನುಸರಿಸ ಬೇಕು ಎಂಬುದು ಇವರ ಧ್ಯೇಯ, ಆಧುನಿಕ ಶೈಲಿಯ ಮನೆಗಳಲ್ಲಿ ಮನೆಯ ಸುತ್ತ ಕೈತೋಟಕ್ಕೆ ವ್ಯವಸ್ಥೆಇಲ್ಲದಿದ್ದರು ತಾರ್ಸಿ ತೋಟ ಮಾಡಿ ಪಾಟ್ ಗಳ ಮೂಲಕ 350 ಪ್ರಭೇದದ ಗಿಡಗಳನ್ನು ಬೆಳೆದಿದ್ದಾರೆ.
10 ರಿಂದ 15 ಬಗೆಯ ದಾಸವಾಳ ಗಿಡಗಳು, 20 ಬಗೆಯ ಗುಲಾಬಿಗಳು, ದೊಡ್ಡಪತ್ರೆ, ಒಂದಲಗ, ಪುದೀನ, ನುಗ್ಗೆ, ಮೆಹದಿಯಂತಹ ಔಷಧಿ ಗಿಡಗಳನ್ನು ಬೆಳೆದಿದ್ದಾರೆ. ಇವುಗಳಿಗೆ ಮನೆಯಲ್ಲೆ ತಯಾರಿಸಿದ ಎರೆಹುಳುವಿನ ಗೊಬ್ಬರ ಬಳಸುತ್ತಾರೆ.

ಹಿಮಾಲಯದಲ್ಲಿ ಬೆಳೆಯುವ ಹಣ್ಣುಗಳು, ಡೆಜ಼ರ್ಟ್ ರೋಜ಼್, ಪೀನಟ್ ಬಟರ್, ಮಿರಾಕಲ್ ಫ್ರೂಟ್, ಆಫ್ರಿಕನ್ ರೋಜ಼್, ಚರ್ರಿ, ಕಮಲ್ ದ್ರಾಕ್ಷಿ, ಕಿತ್ತಲೆ, ಬೋರೆ, ಮೋಸಂಬಿ ಹಣ್ಣುಗಳನ್ನು ಸಹ ಪಾಟ್ ನಲ್ಲಿ ಬೆಳೆದಿರುವ ಇವರು ಹೇಳುತ್ತಾರೆ ಗಿಡಗಳು ಮಕ್ಕಳಂತೆ, ಪ್ರೀತಿ- ಕಾಳಜಿ ತೋರಿದರೆ ಎಲ್ಲಿ ಬೇಕಾದರು ಬೆಳೆಯಬಹುದು ಎನ್ನುತ್ತಾರೆ.

ಕ್ರೋಮಿಯಂ, ಲೆಡ್, ಆರ್ಸನಿಕ್ ಮೆಟಲ್ ನಂತಹ ಅಂಶಗಳುಳ್ಳ ಪಟಾಕಿಗಳನ್ನು ಹೆಚ್ಚಾಗಿ ವಿರೋಧಿಸುವ ಇವರು, ದೀಪಾವಳಿ ಪಟಾಕಿವಳಿಯಲ್ಲ ಎಂದು ಜಾಗೃತಿ ಮೂಡಿಸುತ್ತಾರೆ.

ಇಂಧನಗಳ ಬಳಕೆ ಮತ್ತು ಅವುಗಳಿಂದ ಪರಿಸರಕ್ಕಾಗುವ ಹಾನಿಯನ್ನು ತಡೆಯಲು ಎಲೆಕ್ಟ್ರಾನಿಕ್ ವಾಹನವನ್ನು ಬಳಸುತ್ತಾರೆ.

ಸಾವಯವ ಆಹಾರ ಪದ್ದತಿಯ ಮೌಲ್ಯವನ್ನು ಅರಿತಿರುವ ಇವರು 28 ವರ್ಷಗಳಿಂದ ಸಕ್ಕರೆಯನ್ನು ತಮ್ಮ ಆಹಾರದಿಂದ ದೂರವಿಟ್ಟಿದ್ದಾರೆ. ಫಾಸ್ಟ್ ಫುಡ್ ಬದಲು ಸಿರಿಧಾನ್ಯಗಳಿಗೆ ಆಧ್ಯತೆ ನೀಡಿದ್ದಾರೆ.
ಕಚ್ಚಾ ಆಹಾರವನ್ನು ಬಳಸುವ ಇವರು ಕೊಬ್ಬರಿ ಎಣ್ಣೆಯನ್ನು ಬಿಟ್ಟು ಬೇರೆ ಎಣ್ಣೆ ಬಳಸುವುದಿಲ್ಲ.

ಶಿಕ್ಷಕರ ಈ ಪರಿಸರ ಕಾಳಜಿ ಜನರಿಗಲ್ಲದೆ ಪ್ರಕೃತಿಗೂ ಹೆಚ್ಚು ಪ್ರಿಯವಾಗಿದೆ. ಇವರ ಈ ಪ್ರಕೃತಿ ಪ್ರೇಮ ಯುವಜನತೆಗೆ ಹೆಚ್ಚು ಸ್ಪೂರ್ತಿಯಾಗಿದೆ.

ಚೈತ್ರ ಗೌಡ ಹಾಸನ್

NO COMMENTS

LEAVE A REPLY