ಪರಿಸರ ನಮ್ಮ ಪ್ರಕೃತಿ, ಅದನ್ನು ಉಳಿಸುವುದು ನಮ್ಮ ಸಂಸ್ಕೃತಿ

ಪರಿಸರ ನಮ್ಮ ಪ್ರಕೃತಿ, ಅದನ್ನು ಉಳಿಸುವುದು ನಮ್ಮ ಸಂಸ್ಕೃತಿ

321
0
SHARE

 

ವಿಶ್ವ ಪರಿಸರ ದಿನದ ವಿಶೇಷವಾಗಿ ಇಂದು ಮೈಸೂರಿನ ದೇವರಾಜು ಅರಸು ರಸ್ತೆ ಯಲ್ಲಿ ಗಂಧದಗುಡಿ ಫೌಂಡೇಶನ್ (ರಿ.) ರವರ ವತಿಯಿಂದ ಪರಿಸರ ಶುದ್ಧ ಹಾಗೂ ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡೋಣ ಎಂಬ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.
ಇಂದಿನ ಈ ಕಾರ್ಯ ಕ್ರಮ ಸುಮಾರು ಬೆಳ್ಳಗೆ 11.30 ರ ವೇಳೆಗೆ ಪ್ರಾರಂಭವಾಯಿತು, ಈ ಕಾರ್ಯಕ್ರಮದಲ್ಲಿ ರಸ್ತೆ ಬದಿಯ ಎಲ್ಲಾ ಪ್ಲಾಸ್ಟಿಕ್ ತೆಗೆದು ಹಾಗೂ ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಅದರೊಂದಿಗೆ ಸತತ ಒಂದು ಗಂಟೆಗಳ ಕಾಲ ಹನ್ನೆರೆಡು ಬ್ಯಾಗ್ ಗಳಷ್ಟು ಪ್ಲಾಸ್ಟಿಕ್ ತೆಗೆದು ಸ್ವಚ್ಛ ಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗಂಧದಗುಡಿ ಫೌಂಡೇಶನ , ಅಧ್ಯಕ್ಷರಾದ ಮೋಹನ್ ಕುಮಾರ್, ಮುಖಂಡರಾದ ಮಿಂಚು, ಕಾರ್ಯದರ್ಶಿಗಳಾದ ಸಂಧ್ಯಾ ನಂದನ್ ಹಾಗೂ ಸದಸ್ಯರುಗಳಾದ ಅನುಷಾ ಪಕಳಿ , ನಂಧಿಶ್, ಸಂದೀಪ್, ಧನುಷ್ ಮತ್ತು ಸ್ವಯಂ ಸೇವಕ ರಾದ ವಿಜಯ್, ಲೋಹಿತ್, ಹೃಶಬ್ ಮತ್ತು ರಘು ಪಾಲ್ಗೊಂಡಿದ್ದರು.

ವರದಿ ಹಾಗೂ ಛಾಯಾಚಿತ್ರ: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY