ವಿಶ್ವ ಯೋಗ ದಿನಕ್ಕೆ ಮೈಸೂರಿನಲ್ಲಿ ಪೂರ್ವತಯಾರಿ…!

ವಿಶ್ವ ಯೋಗ ದಿನಕ್ಕೆ ಮೈಸೂರಿನಲ್ಲಿ ಪೂರ್ವತಯಾರಿ…!

81
0
SHARE

ಮೈಸೂರು(ಜೂ.3.2018): ಜೂನ್ 21 ರ ವಿಶ್ವ ಯೋಗ ದಿನ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರು ಪೂರ್ವ ತಯಾರಿ ನಡೆಸುತ್ತಿದ್ದು,  ಇಂದು ಮುಂಜಾನೆ ಯೋಗ ಪಟು ಗಳು ಅರಮನೆಯ ಮುಂಭಾಗ ಯೋಗಾಭ್ಯಾಸ  ನಡೆಸಿದರು.

ಇಂದು ಮುಂಜಾನೆ  5:30  ರಿಂದಲೇ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿ ಯೋಗ ಮಾಡಿದರು.  ಕಳೆದ ವರ್ಷ ವಿಶ್ವ ಯೋಗ ದಿನದಂದು ಮೈಸೂರಿನಲ್ಲಿ  55 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಯೋಗ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು ,ಅಂದು ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಾರೆ  ಎನ್ನಲಾಗಿತ್ತು. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಿಲ್ಲ.

ಜೂನ್ 21 ರ ವಿಶ್ವ ಯೋಗ ದಿನ ಯೋಗ ಪ್ರದರ್ಶಿಸಿ ದಾಖಲೆ ನಿರ್ಮಿಸಲು ಮಲ್ಲಿಗೆ ನಗರಿ ಮೈಸೂರು ಸಜ್ಜಾಗುತ್ತಿದ್ದು,  ಇಂದು ಮುಂಜಾನೆ ಯೋಗ ಪಟು ಗಳು ಅರಮನೆಯ ಮುಂಭಾಗ ಯೋಗಾಭ್ಯಾಸ ನಡೆಸಿದರು.

NO COMMENTS

LEAVE A REPLY