ಆರ್. ಆರ್ ನಗರ ಚುನಾವಣಾ ಫಲಿತಾಂಶ : ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಗೆಲುವು.

ಆರ್. ಆರ್ ನಗರ ಚುನಾವಣಾ ಫಲಿತಾಂಶ : ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಗೆಲುವು.

182
0
SHARE

ಬೆಂಗಳೂರು(ಮೇ,31,2018):ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್‌ನ ಮುನಿರತ್ನ ಅವರು ಸುಮಾರು 46 ಸಾವಿರಗಳ ಮತಗಳಿಗಿಂತ ಹೆಚ್ಚುಅಂತರಗಳಿಂದ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದು ಬಾಕಿಯಿದೆ.

ಕಾಂಗ್ರೆಸ್ ನ ಮುನಿರತ್ನ 84908, ಮತಗಳು, ಬಿಜೆಪಿಯ ತುಳಸಿ ಮುನಿರಾಜ್ ಗೌಡ 38,357 ಮತಗಳನ್ನು, ಜೆಡಿಎಸ್ ನ ರಾಮಚಂದ್ರಗೌಡ 29,519 ಮತಗಳನ್ನು ಪಡೆದುಕೊಂಡಿದ್ದಾರೆ.  ಈ ಮೂಲಕ ಮುನಿರತ್ನ  ಎರಡನೇ ಬಾರಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

 ಇನ್ನು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಬಿಲ್ಡಿಂಗ್ ಒಂದರಲ್ಲಿ 9 ಸಾವಿರ ವೋಟರ್ ಐಡಿ ಪತ್ತೆಯಾದ ಪ್ರಕರಣ ಸಂಬಂಧ ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ಮತದಾನ ನಡೆದಿದ್ದು, ಶೇ 54.20 ರಷ್ಟು ಮತದಾನ ನಡೆದಿತ್ತು.

NO COMMENTS

LEAVE A REPLY