ಕರ್ನಾಟಕದಲ್ಲಿ ಶೇ 26.3ರಷ್ಟು ಧೂಮಪಾನಿಗಳು..!

ಕರ್ನಾಟಕದಲ್ಲಿ ಶೇ 26.3ರಷ್ಟು ಧೂಮಪಾನಿಗಳು..!

183
0
SHARE

ಬೆಂಗಳೂರು(ಮೇ.31.2018): ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 26.3ರಷ್ಟು ಧೂಮಪಾನಿಗಳಿದ್ದಾರೆ. ಇವರಲ್ಲಿ ಪುರುಷರು ಶೇ 16.8ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ 0.7ರಷ್ಟಿದೆ. ವಯಸ್ಕರು ಶೇ 8.8ರಷ್ಟಿದ್ದಾರೆ.

ರಾಜ್ಯದಲ್ಲಿ ತಂಬಾಕು ಸೇವಿಸುವವರ ಕುರಿತು ಗ್ಯಾಟ್ಸ್‌ (ದಿ ಗ್ಲೋಬಲ್‌ ಅಡಲ್ಟ್ ಟೊಬ್ಯಾಕೊ) ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಮಾಹಿತಿ ಹೊರಬಿದ್ದಿದೆ.

ಟಾಟಾ ಇನ್‌ಸ್ಟಿಟ್ಯೂಟ್ ಆಫ್‌ ಸೋಷಿಯಲ್‌ ಸೈನ್ಸ್‌’, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರದ ಸಹಯೋಗದೊಂದಿಗೆ ಗ್ಯಾಟ್ಸ್‌ ಈ ಸಮೀಕ್ಷೆ ನಡೆಸಿದೆ. 1,311 ಪುರುಷರು ಹಾಗೂ 1,403 ಮಹಿಳೆಯರನ್ನು ಸಂದರ್ಶಿಸಲಾಗಿದೆ. 15 ವರ್ಷ ದಾಟಿದವರನ್ನು ಮಾತ್ರ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಸಮಾಧಾನಕರ ಸಂಗತಿ ಎಂದರೆ, 2009–10ರ ಸಾಲಿಗೆ ಹೋಲಿಸಿದರೆ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ 3.1ರಷ್ಟು ಇಳಿಮುಖವಾಗಿದೆ. ಇಷ್ಟೇ ಪ್ರಮಾಣದಲ್ಲಿ ತಂಬಾಕು ಜಗಿಯುವವರ ಸಂಖ್ಯೆ ಕೂಡ ಕಡಿಮೆಯಾಗಿದೆ.

NO COMMENTS

LEAVE A REPLY