ಆಪರೇಷನ್ ಕಮಲ ಸ್ಟಾರ್ಟ್.. 5 ಮಂದಿ ಶಾಸಕರು ಬಿಜೆಪಿ ತೆಕ್ಕೆಗೆ..! ಯಾರು ಗೊತ್ತಾ ಆ ಐವರು...

ಆಪರೇಷನ್ ಕಮಲ ಸ್ಟಾರ್ಟ್.. 5 ಮಂದಿ ಶಾಸಕರು ಬಿಜೆಪಿ ತೆಕ್ಕೆಗೆ..! ಯಾರು ಗೊತ್ತಾ ಆ ಐವರು ಶಾಸಕರು?

1053
0
SHARE

ನೆನ್ನೆಯಷ್ಟೇ ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಯಾವ ಪಕ್ಷವೂ ಸಹ ಸ್ಪಷ್ಟ ಬಹುಮತ ಸಾಧಿಸದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ ನಿನ್ನೆ ಸಾಯಂಕಾಲದ ವೇಳೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ನಿರೂಪಿಸುವ ಸುದ್ದಿ ಇತ್ತು.

ಹೆಚ್ಚು ಸ್ಥಾನಗಳಲ್ಲಿ ಗೆದ್ದರೂ ಸಹ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ಕೈತಪ್ಪಿತು ಎಂದು ಎಲ್ಲರೂ ಮಾತನಾಡಿ ಕೊಳ್ಳುತ್ತಿರುವಾಗಲೇ ಇದೀಗ ಈ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರಕಿದೆ.

ಹೌದು ಇದೀಗ ಬಂದಿರುವ ಸುದ್ದಿಯ ಪ್ರಕಾರ ಕಾಂಗ್ರೆಸ್ಸಿನ ನಾಲ್ಕು ಶಾಸಕರು ಮತ್ತು ಒಬ್ಬ ಪಕ್ಷೇತರ ಶಾಸಕರು ಬಿಜೆಪಿ ಸೇರಲು ತಯಾರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಒಟ್ಟು ಐದು ಶಾಸಕರು ಬಿಜೆಪಿ ಪಕ್ಷ ಸೇರಲು ತಯಾರಿ ದ್ದಾರೆ ಎಂಬುದು ತಿಳಿದು ಬರುತ್ತಿದೆ.

ಆ ಐದು ಶಾಸಕರು ಯಾರೆಂದರೆ, ಕಾಂಗ್ರೆಸ್ಸಿನ ಆನಂದ್ ಸಿಂಗ್, ನಾಗೇಂದ್ರ, ರಾಜಶೇಖರ್ ಪಾಟೀಲ್, ಎಂ ವೈ ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿಯಾದ ರಾಣೆಬೆನ್ನೂರಿನ ಶಾಸಕ ಶಂಕರ್ ಎಂದು ತಿಳಿದು ಬಂದಿದೆ. ಈ ಐದು ಶಾಸಕರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಒಂದು ವೇಳೆ ಈ ಐದು ಜನ ಬಿಜೆಪಿ ಪಕ್ಷ ಸೇರಿದ್ದೇ ಆದರೆ ಬಿಜೆಪಿಯ ಒಟ್ಟು ಶಾಸಕರ ಬಲ 109 ಕ್ಕೆ ಏರಲಿದೆ. ಆಗಲೂ ಸಹ ಬಿಜೆಪಿ ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸಲು ಇನ್ನೂ ನಾಲ್ಕು ಜನ ಶಾಸಕರ ಅಗತ್ಯತೆ ಇರುತ್ತದೆ.

NO COMMENTS

LEAVE A REPLY