ನಾವ್ಯಾಕೆ ರೆಸಾರ್ಟ್ ಗೆ ಹೋಗೋಣ: ಸಿದ್ದರಾಮಯ್ಯ

ನಾವ್ಯಾಕೆ ರೆಸಾರ್ಟ್ ಗೆ ಹೋಗೋಣ: ಸಿದ್ದರಾಮಯ್ಯ

157
0
SHARE

 

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಮಾಹಿತಿ ನನಗಿಲ್ಲ. ನಾವ್ಯಾಕೆ ರೆಸಾರ್ಟ್ ಗೆ ಹೋಗಬೇಕೆಂದು ಹಂಗಾಮಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ಕಾಂಗ್ರೆಸ್-ಜೆಡಿಎಸ್ ಶಾಸಕಾಂಗದ ಸಭೆ ನಡೆಯಲಿದೆ. ಸಭೆಯಲ್ಲಿ ಒಮ್ಮತದ ತೀರ್ಮಾಣ ತೆಗೆದುಕೊಳ್ಳಲಾಗುವುದು. ಈಗಾಗಲೇ ರಾಜ್ಯಪಾಲರಿಗೆ ಸರ್ಕಾರ ರಚನೆ ಮಾಡಲಿದ್ದೇವೆ ಅಂತಾ ಪತ್ರ ಬರೆಯಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ದೇವೇಗೌಡರಿಗೂ ನಮ್ಮ ಬೆಂಬಲವಿದೆ ಅಂತಾ ಪತ್ರದ ಮೂಲಕ ತಿಳಿಸಿದ್ದೇವೆ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯಪಾಲರ ಅಂಗಳದಲ್ಲೀಗ ಸರ್ಕಾರದ ಚೆಂಡು: ಯಾವ ಸಮಯದಲ್ಲಿ ಏನಾಯ್ತು?

ಇನ್ನು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಮಾಡೋದು ಸಹಜ. ಆದ್ರೆ ಆ ವಿಚಾರ ಈಗ ಅಪ್ರಸ್ತುತ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಸರ್ಕಾರ ರಚನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಯಾವ ಆಪರೇಷನ್ ಕಮಲ ಕೂಡ ನಡೆಯಲ್ಲ ಅಂತಾ ತಿಳಿಸಿದ್ದಾರೆ.

ವರದಿ ಸಂದೀಪ್ ಶನಿವಾರಸಂತೆ.

NO COMMENTS

LEAVE A REPLY