ಮೈಸೂರಿನಲ್ಲಿ ಮತ್ತೊಂದು ಭೂ ಮಂಡಲ

  393
  0
  SHARE

  ಮೈಸೂರಿನಲ್ಲಿ ಮತ್ತೊಂದು ಭೂ ಮಂಡಲ..!

  ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು, ನದಿ, ಅಭಯಾರಣ್ಯವನ್ನೇ ಹೋಲುವಂತಹ ಮೃಘಾಲಯಗಳಿಂದ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಸಾಂಸ್ಕತಿಕ ನಗರ ಮೈಸೂರು. ಈ ನಗರವು ಪ್ರಾಕೃತಿಕ ಸ್ವರೂಪವನ್ನೇ ಹೋಲುವ ಮತ್ತೊಂದು ಕಟ್ಟಡದೊಳಗಿನ ಕಾಡನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಜನಸಾಮಾನ್ಯರಿಗೆ ಅನೌಪಚಾರಿಕವಾಗಿ ಪರಿಸರ ಶಿಕ್ಷಣವನ್ನೂ ಸಹ ನೀಡುತ್ತಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತುಸಂಗ್ರಹಾಲಯವು ಸ್ಥಾಪನೆಯಾಗಿದ್ದು 1995ರಲ್ಲಿ, ಈ ಸಂಸ್ಥೆಸಯ ಒಳ ಭಾಗಕ್ಕೆ ಪ್ರವೇಶಿಸುತ್ತಿದ್ದಂತೆ ಬೆಟ್ಟಗಳ ನಡುವೆ ಉದಯಿಸುವ ಸೂರ್ಯನಂತೆ ಶೋ ಮರವು ನಮ್ಮನ್ನು ಸ್ವಾಗತಿಸುತ್ತದೆ. ನಂತರವೇ ಕಾಣಸಿಗುವ ತಂತಿ ಗಳಿಂದ ಸಿದ್ದಗೊಳಿಸಿ ರುವ ಆನೆಗಳ ಆಕೃತಿಗಳು ಆನೆಯ ಅಸ್ತಿಪಂಜ ರದಂತೆ ಗೋಚರಿಸುತ್ತವೆ.

  ಕೃತಕ ಹುಲಿ, ಚಿರತೆ, ಕರಡಿ ಮುಂತಾದ ಪ್ರಾಣಿ ಪಕ್ಷಿಗಳನ್ನು ಒಳಗೊಂಡಿರುವ ಸಂಗ್ರಹಾಲಯವು ಒಂದು ಕೃತಕ ಮೃಘಾಲಯವೇ ಆಗಿದೆ.
  ಭಾರತದ ಜೀವ ವೈವಿದ್ಯತೆಗೆ ಒತ್ತು ನೀಡಿರುವ ಸಂಸ್ಥೆಯು ಜೀವಿಗಳ ಇರುವಿಕೆ ಹಾಗೂ ಸಂರಕ್ಷಣಾ ಪರಂಪರೆಯ ಮಹತ್ವದ ಕಲಿಕೆಯನ್ನೂ ನೀಡುತ್ತದೆ. ಪಶ್ಚಿಮ ಘಟ್ಟಗಳ ಪ್ರಾಕೈತಿಕ ಪರಂಪರೆಯನ್ನು ಕುರಿತ ತೆರೆದ ಪ್ರದರ್ಶಕವು ಅಲ್ಲಿನ ಮಳೆ, ಆದ್ರ್ರತೆಗಳು ಹಾಗೂ ಇವುಗಳ ಮೇಲೆ ಅವಲಂಬಿತವಾಗಿರುವ ಸಸ್ಯ-ಪ್ರಾಣಿ ಸಂಕುಲಗಳ ಭೌಗೋಳಿಕ, ಭೂಗರ್ಭೀಯ ವಿಚಾರಗಳನ್ನು ಚಿತ್ರಿಸಿದೆ. ಮುಂದುವರೆದು ಒಳ ಹೊದರೆ ಭಾರತದ ವನ್ಯ ಸಂಪತ್ತು, ಸಸ್ಯ-ಪ್ರಾಣಿಗಳ ಹೊಂದಾಣಿಕೆ, ಕೀಟಹಾರಿ ಸಸ್ಯಗಳು, ಕೀಟಗಳು ಮತ್ತು ಹಕ್ಕಿಗಳ ವರ್ಣ ವೈವಿದ್ಯತೆಗೆ ಉಷ್ಣವಲಯದ ಮಳೆ ಕಾಡುಗಳು ಹೇಗೆ ಕಾರನವಾಗಿದೆ ಎಂಬುದರ ಕುತೂಹಲಕಾರಿ ವಿಷಯ ಗಳನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲ ಯವು ಜೌಗು ಭೂಮಿಯ ಮಹತ್ವ ಹಾಗೂ ಉಪಯುಕ್ತತೆಗಳನ್ನೂ ಸಹ ತೋರಿಸುತ್ತದೆ.

  ಈ ಕೃತಕ ಕಾಡಿನಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿ ಪ್ರಾಣಿಗಳೆರೆಡನ್ನೂ ಒಂದೇ ಪ್ರದರ್ಶಕದಲ್ಲಿಟ್ಟಿದ್ದು ಒಂದೇ ಊರಿನಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂಬ ನೀತಿಯನ್ನು ಹೇಳಿಕೊಡುವಂತಿದೆ. ಕಾಂಡ್ಲ ಕಾಡುಗಳ ವೈಚಿತ್ರ್ಯ ವಿಶೇಷ ಗಳನ್ನು, ಸಮುದ್ರದ ತಡಿಯಿಂದ ಸಾಗರ ದಾಳದವರೆಗೂ ಇರುವ ಜೀವ ವೈವಿದ್ಯವನ್ನೂ ವಿವರಿಸುವ ಪ್ರದರ್ಶಕಗಳು ನಾವು ಸಮುದ್ರದ ಒಳಗೆಯೇ ಸಂಚರಿಸುತ್ತಿದ್ದೇವೆನೋ ಎಂಬ ಭಾವನೆಯನ್ನು ಮೂಢಿಸುತ್ತವೆ. ದಕ್ಷಿಣ  ಕರ್ನಾಟಕದ ಜೀವನದಿ ಯಾಗಿರುವ ಕಾವೇರಿ ನದಿಯ ಉಗನ ಸ್ಥಾನದಿಂದ ಸಾಗರದ ಜೊತೆ ಸಂಗಮದ ವರೆಗೂ ನದಿಯ ಇಕ್ಕೆಲಗಳಲ್ಲಿನ ಜೈವಿಕ ಇತಿಹಾಸವನ್ನು ಒಂದು ಬೃಹತ್ ಫಲಕವು ವಿವರಿಸುತ್ತದೆ. ಜೊತೆಗೆ ಸುರಂಗ ಮಾರ್ಗವೊಂದರಲ್ಲಿ ಭೂಮಿಯ ಹುಟ್ಟಿ ನಿಂದ ಇದುವರೆಗಿನ ಜೈವಿಕ ಉನ್ನತಿ-ಅವನತಿಗಳನ್ನು ವಿವಿಧ ಪ್ರದಶಿಕೆಗಳು ಮೌನವಾಗಿ ಬಿಚ್ಚಿಡುತ್ತವೆ.

  ಇಲ್ಲಿಗೆ ಭೇಟಿಕೊಡುವ  ಸಂದರ್ಶಕರಿಗೆ ನಾವು ಮತ್ತೊಂದು ಭೂಮಂಡಲಕ್ಕೇ ಬಂದಿದ್ದೇವೆನೋ ಎಂನ ಭಾವನೆಯನ್ನು ಮೂಢಿಸುತ್ತದೆ. ಮಕ್ಕಳಿಗಾಗಿ ಮಣ್ಣಿನ ಪರೀಕ್ಷೆ ಮಾಡುವುದು, ಮುಖವಾಡ, ವೇಶಭೂಷಣಗಳ ರಚನೆ ಮುಂತಾದ ಸೃಜನಾತ್ಮಕ ಚಟುವಟಿಕೆಗಳಿಗೆ ಅವಕಾಶ ಕಲ್ಟಿಸಿರುವ ಸಂಗ್ರಹಾಲಯವು ಪ್ರಕೃತಿಯ ಪ್ರಾಕೃತಿಕ ಇತಿಹಾಸವನ್ನು ಮನವರಿಗೆ ಮಾಡಲು ಪ್ರತಿದಿನ ಚಲನಚಿತ್ರವನ್ನೂ ಸಹ ಪ್ರದರ್ಶಿಸಿತ್ತಿದೆ.

  ಹಲವು ವಿಶೇಷತೆಗಳನ್ನು ಹೊಂದಿ ರುವ ಸ್ರಂಗ್ರಹಾಲಯಕ್ಕೆ ಭೇಟಿನೀಡಿದ ಪ್ರವಾಸಿಗರೊಬ್ಬರು “ಭಿತ್ತಿಚಿತ್ರಗಳು ನೈಸರ್ಗಿಕ ಪರಂಪರೆ ಹಾಗೂ ಜೈವಿಕ ಪರಂಪರೆಯ ಮೇಲೆ ಮಾನವನ ಹಸ್ತಕ್ಷೇಪದಿಂದ ಒದಗಬಹುದಾದ ಅಪಾಯವನ್ನು ಚಿತ್ರಗಳು ಮೂಕ ವಾಗಿಯೇ ಎಚ್ಚರಿಸುತ್ತಿವೆ” ಎಂದು ಭಾವುಕರಾಗುವಂತೆ ಮಾಡಿದ ಈ ಮಾನವ ನಿರ್ಮಿತ ಕಾಡು ಹೊಸ ಅನುಭವವನ್ನು ನೀಡದೆ ಇರಲಾರದು.

  -ಸೋಮಶೇಖರ್ ಚಲ್ಯ
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ,ಮೈಸೂರು.

  NO COMMENTS

  LEAVE A REPLY