ನಿಮ್ಮ‌ ಮತ ಜನಪರ ಕಾಳಜಿಯಾಗಲಿ…!!!

  221
  0
  SHARE

  ನಿಮ್ಮ‌ ಮತ ಜನಪರ ಕಾಳಜಿಯಾಗಲಿ…!!!

  ನಮ್ಮದು ಪ್ರಜಾಸತ್ತಾತ್ಮಕ ದೇಶ. ಪ್ರಜೆಗಳ ಮತವನ್ನು ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರಕಾರ ನಡೆಸಬೇಕೆಂಬುದೇ ಪ್ರಜಾತಂತ್ರದ ಆಶಯ, ಅಭಿಪ್ರಾಯ. ಸರಕಾರವು ಜನಾಭಿಪ್ರಾಯದಂತೆ ನಡೆಯುತ್ತಿರಬೇಕು. ಜನಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಬೆಳಕು, ಔಷಧಿ ಇತ್ಯಾದಿಗಳ ಸಮರ್ಪಕ ಅರಿವು, ಹಂಚಿಕೆ ಎಲ್ಲವನ್ನೂ ಸರಕಾರವೇ ನಡೆಸಬೇಕು. ಈ ಕಾರಣದಿಂದಲೇ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ, ಸರಕಾರ ನಡೆಸಲು ಕಳಿಸುವ ಗುರುತರ ಹೊಣೆಗಾರಿಕೆ ಎಲ್ಲಾ ಜನಗಳದು.

  ಇಂತಹ ಚುನಾವಣೆಗಳು ಪ್ರಜಾತಂತ್ರದ ಆಧಾರಗಳೂ ಆಗಿವೆ. ತಮ್ಮ ನಾಯಕರ ಭ್ರಷ್ಟಾಚಾರ, ಆಳುವ ಜನರಿಂದಲೇ ನಡೆಯುತ್ತಿರುವ ಲೂಟಿ, ಅನಾಚಾರವೇ ವಿಚಾರವಂತ ಪ್ರಜೆಗಳಲ್ಲಿ ಮತದಾನ, ಚುನಾವಣೆ ಕುರಿತ ಆಸಕ್ತಿಯನ್ನು ಕುಂದಿಸಿರಬಹುದು. ಆದರೆ ದೇಶವನ್ನು ಬದಲಾಯಿಸುವ ಶಕ್ತಿ ಪ್ರಜೆಗಳೇ. ಅರ್ಹ ಪ್ರತಿನಿಧಿಯನ್ನು ಚುನಾಯಿಸಿ ದೇಶದಲ್ಲಿ ನ್ಯಾಯಪರ ಸರಕಾರವನ್ನು ಜಾರಿಗೆ ತರುವ ಜವಾಬ್ದಾರಿ ಪ್ರಜೆಗಳ ಮೇಲಿದೆ ಎಂಬುದನ್ನು ಯಾವ ಪ್ರಜೆಯೂ ಮರೆಯಬಾರದು.

  ಹಲವು ಆಮಿಷಗಳಿಂದ ಮತದಾರರನ್ನು ಸೆಳೆದು ಗೆದ್ದುಬರುವ ಪ್ರಯತ್ನ ಅಭ್ಯರ್ಥಿಗಳಿಂದ ನಡೆಯುತ್ತದೆ. ಚುನಾವಣೆ ಹತ್ತಿರ ಬರುತ್ತಿರುವಾಗ, ಆಶ್ವಾಸನೆಗಳೂ ಹೆಚ್ಚುತ್ತಾ ಹೋಗುತ್ತದೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳಿಂದ ಏನೇ ಕಾರ್ಯಕ್ರಮಗಳನ್ನು ನಡೆಸಿ‌ ಬೆಣ್ಣೆ ಹಚ್ಚಿದರೂ ಮತದಾರರ ನಿಲುವು ಮಾತ್ರ ನಿರ್ದಿಷ್ಟವಾಗಿರಬೇಕು. ಜಾತಿ,ಧರ್ಮ,ಮೀರಿದ ನಿಜವಾದ ಜನಸೇವಕನನ್ನೇ ಆಯ್ಕೆ ಮಾಡಿ, ದೇಶದ ಅಭಿವೃದ್ಧಿಗೆ, ೯೦% ಬಡಜನರ ಒಳಿತಿಗೆ ಪರೋಕ್ಷವಾಗಿ ಮತದಾರರೇ ಕಾರಣರಾಗುತ್ತಾರೆ ಎಂಬುದು ಪ್ರತಿ ಮತದಾರನ ಗಮನದಲ್ಲಿರಬೇಕು.
  -ಪೊನ್ನಮ್ಮ.ಪಿ‌.ಸಿ
   ಪತ್ರಿಕೋದ್ಯಮ ವಿದ್ಯಾರ್ಥಿನಿ
  ‌‌‌‌‌‌ ಮಾನಸ ಗಂಗೋತ್ರಿ.ಮೈಸೂರು.

  NO COMMENTS

  LEAVE A REPLY