ಯಾವ ಘನ ಕಾರ್ಯಕ್ಕಾಗಿ ವಿದೇಶಿ ಪ್ರವಾಸ!?

  193
  0
  SHARE

  ಯಾವ ಘನ ಕಾರ್ಯಕ್ಕಾಗಿ ವಿದೇಶಿ ಪ್ರವಾಸ!?

  ಉತ್ತರ ಪ್ರದೇಶದ‌ ಉನ್ನೊವ‌ ಮತ್ತು ಜಮ್ಮು‌ಕಾಶ್ಮೀರದ ಕಟುವಾ ದ ಪ್ರಕರಣ ವಿರೋಧಿಸಿ ಇಡೀ ದೇಶವೇ ಹೋರಾಟ ನಡೆಸುತ್ತಿದ್ದು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ..ಏನೂ ಜರುಗಿಲ್ಲ‌ವೆಂಬಂತೆ ಮಾನ್ಯ ಪ್ರಧಾನ ಮಂತ್ರಿ‌ ನರೇಂದ್ರ‌ಮೋದಿ ಯವರು ವಿದೇಶಿ ಪ್ರವಾಸ ಹೊರಟಿರುವುದು ಅತ್ಯಂತ ಖಂಡನಾರ್ಹವಾದದ್ದು.

  ದಿನನಿತ್ಯ‌ ಒಂದಲ್ಲ ಒಂದು‌‌ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದರೂ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲವೇಕೆ?? ಇನ್ನೆಷ್ಟು ಹೆಣ್ಣು ಮಕ್ಕಳ ಬಲಿಗಾಗಿ ಕಾಯುತಿರುವಿರಿ..!?ಇದರ ಬಗ್ಗೆ‌ ಕಿಂಚಿತ್ತೂ ಚಿಂತಿಸದೇ,
  ಮೌನವಹಿಸಿರುವ  ನೀವು ವಿದೇಶಕ್ಕೆ ಹೋಗಿ ಸಾಧಿಸಬೇಕಾದ ಘನ ಕಾರ್ಯವಾದರೂ ಏನು ಸ್ವಾಮಿ..!? ನಿಮ್ಮ ದಿವ್ಯ ಮೌನವ ಮುರಿದು ಉತ್ತರಿಸಿ..!
  – ನವ್ಯ ವೆಂಕಟೇಶ್
  ಪತ್ರಿಕೋದ್ಯಮ ವಿದ್ಯಾರ್ಥಿನಿ
  ಮಾನಸ ಗಂಗೋತ್ರಿ,ಮೈಸೂರು.

  NO COMMENTS

  LEAVE A REPLY