ಅನಾಚಾರ ಕೃತ್ಯಕ್ಕೆ ಕೊನೆ ಮಂತ್ರ ಹಾಡಲೆಬೇಕು

  235
  0
  SHARE

  ಅನಾಚಾರ ಕೃತ್ಯಕ್ಕೆ ಕೊನೆ ಮಂತ್ರ ಹಾಡಲೆಬೇಕು

  21ನೆ ಶತಮಾನದಲ್ಲಿಯು ಹೆಣ್ಣು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯೆ ಸರಿ. ಆಕೆ ಗಂಡಿನ ಭೋಗ್ಯದ ವಸ್ತು,ಹೆರುವ ಯಂತ್ರ ನಾಲ್ಕು ಗೋಡೆಯ ಮಧ್ಯೆ ಇರಬೇಕೆಂಬ ಕಟ್ಟಳೆಯನ್ನು ದಾಟಿ ತನ್ನ ಅಸ್ತಿತ್ವವನ್ನು ಪಡೆಯಲು ಹೋರಾಡಿ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾಳೆ.

  ದರ ನಡುವೆ ಹೆಣ್ಣನ್ನು ಕೀಳಾಗಿ ನೋಡುವ ಪ್ರವೃತ್ತಿ ಮುಂದುವರೆದಿದೆ.ನಿರ್ಭಯಳ ಅಮಾನುಷ ಅತ್ಯಾಚಾರದ ಪ್ರಕರಣ ನಂತರವು ಹೀನ ಕೃತ್ಯಗಳಿಗೆ ಕಡಿವಾಣ ಬೀಳಲಿಲ್ಲ.ಇಂತಹ ಮೃಗೀಯ ವರ್ತನೆಗೆ ಹೆಣ್ಣು ಎಂಬ ಅಂಶವೆ ಸಾಕಾಗಿತ್ತು.ದಿನ ಬೆಳಗಾದರೆ ಅತ್ಯಾಚಾರದ ಸುದ್ದಿ ಬಿತ್ತರವಾಗುವುದು ಸಾಮಾನ್ಯ ಸಂಗತಿಯಾಗಿತ್ತು. ದೇಶವೆ ಬೆಚ್ಚಿ ಬೀಳುವ ಸುದ್ದಿ,ಹತ್ತರಲ್ಲಿ ಹನ್ನೊಂದರಂತೆ ಅಸೀಫಳ ಪ್ರಕರಣ ಸೇರಿತು .ನಲಿಯುತ್ತಿದ್ದ ಅರಳುತ್ತಿರುವ ಮುಗ್ಧ ಹೂವನ್ನು ತಮ್ಮ ತೆವಲಿಗೆ ಹೊಸಿಕೆಹಾಕಿದ್ದು ಪುರುಷ ಕ್ರೂರತೆಯ ಪರಾಮವಧಿ.

  ಇಂತಹ ವಿಕೃತಕಾಮುಕಗಳಿಗೆ ಕೊನೆಯೆಂದು. ಹೆಣ್ಣು ಮಧ್ಯರಾತ್ರಿಯಲ್ಲ ಹಗಲಿನಲ್ಲಿಯು ಸ್ವತಂತ್ರವಾಗಿ ಓಡಾಡಲು ಭಯ ಪಡುತ್ತಿದ್ದಾಳೆ. ಒಂಟಿ ಹೆಣ್ಣಿನ ಮೇಲೆ ಹತ್ತಾರು ಹದ್ದಿನ ಕಣ್ಣುಗಳು.ಇನ್ನೆಷ್ಟು ಬಲಿಯಾಗಬೇಕು. ಇದಕ್ಕೆಲ್ಲ ಕೊನೆಯಾಗಲೆಬೇಕು. ಅತ್ಯಾಚಾರಿಗೆ ಗಲ್ಲು ಶಿಕ್ಷೆಯಲ್ಲ, ಸಾರ್ವಜನಿಕವಾಗಿ ಚಿತ್ರ ಹಿಂಸೆ ನೀಡಿ ಸಾವನ್ನು ಕರುಣಿಸಬೇಕು. ನ್ಯಾಯಾಂಗ ತನಿಖೆಯನ್ನು ೧ತಿಂಗಳೊಳಗೆ ಇತ್ಯರ್ಥಗೊಳಿಸಿ ಅಮಾನವೀಯ ಶಿಕ್ಷೆಯನ್ನು ನೀಡಬೇಕು.ಮುಂದೆ ಮಹಿಳೆಯನ್ನು ಕಾಮದ ದೃಷ್ಟಿಯಲ್ಲಿ ನೋಡಲು ಕೂಡ ಹೆದರಿಕೊಳ್ಳಬೇಕು ಹಾಗದಲ್ಲಿ ಮಾತ್ರವೆ ಇದಕ್ಕೆಲ್ಲ ಕೊನೆಮಂತ್ರ ಹಾಡಬಹುದು.

  -ಚಂದನ್.ಎಸ್.ವೈ
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ, ಮೈಸೂರು.

   

  NO COMMENTS

  LEAVE A REPLY