ರಂಗನತಿಟ್ಟು ಪಕ್ಷಿಧಾಮದಲ್ಲಿ ರಂಗಿನ ಪಕ್ಷಿಗಳ ಕಲರವ ..

  363
  0
  SHARE

  ರಂಗನತಿಟ್ಟು ಪಕ್ಷಿಧಾಮದಲ್ಲಿ ರಂಗಿನ ಪಕ್ಷಿಗಳ ಕಲರವ

  ರಂಗನತಿಟ್ಟು ವಲಸೆ ಪಕ್ಷಿಗಳ ನೆಚ್ಚಿನ ತಾಣ. ಕರ್ನಾಟಕದ ಪಕ್ಷಿಕಾಶಿ ಎಂದು ಕರೆಯಲ್ಪಡುವ ಇಲ್ಲಿ ಪ್ರತಿ ವರ್ಷ ವಿಶ್ವದ ವಿವಿಧ ಭಾಗಗಳಿಂದ ವಿವಿಧ ಬಗೆಯ ಪಕ್ಷಿ ಸಂಕುಲ ಇಲ್ಲಿ ಬಂದು ಸಂತಾನ್ಪೋತಿ ಮಾಡುತ್ತವೆ. ಇಲ್ಲಿನ ಪಕ್ಷಿಗಳನು ನೋಡಲು ಪ್ರವಾಸಿಗರು ವಿವಿಧ ಕಡೆಯಿಂದ ಬರುತ್ತರೆ.

  ರಂಗನತಿಟ್ಟಿಗೆ ಪ್ರವಾಸ ಹೋಗಿದ್ದ ಒಂದು ಅನುಭವ ಈ ಮೂಲಕ ವ್ಯಕ್ತ ಪಡಿಸುತ್ತಿದ್ದೆನೆ. ಕಾವೇರಿ ನದಿಯ ದಂಡೆಯ ಮೇಲೆ ಸುಮಾರು 40 ಎಕರೆ ಪ್ರದೇಶದಲ್ಲಿ ಸುಮಾರು 6 ದ್ವೀಪಗಳಿಂದ ತುಂಬಿದೆ. ಇಂತಹ ಪಕ್ಷಿ ಪ್ರಪಂಚ ನೋಡಲು ನಾನು ಮತ್ತು ನನ್ನ ಗೆಳೆಯರು ಹೊರಟೆವು. ಮೈಸೂರಿನಂದ ಸುಮಾರು 20 ಕೀ.ಮಿ ದೂರದಲ್ಲಿದ್ದ ರಂಗನತಿಟ್ಟುಗೆ ಹೋದ ನಮಗೆ ಮೊದಲಿಗೆ ಸ್ವಾಗತ ಕೋರಿದ್ದು ಮರ-ಗಿಡಗಳ ಪ್ರಕೃತಿ ಸೌಂದರ್ಯ, ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ನಮ್ಮ ಕಣ್ಣಿಗೆ ಕಂಡಿದ್ದು ನಿಶಬ್ದವಾಗಿ ಹರಿಯುತ್ತಿರುವ ಕಾವೇರಿ ನದಿ. ನದಿಯ ದಂಡೆಯ ಮೇಲಿನ ಮರಗಳ ಮೇಲೆ ಕುಳಿತಿರುವ ಪಕ್ಷಿಗಳು, ಭೂಮಿಯ ಮೇಲಿನ ಸ್ವಾರ್ಗ ನಮ್ಮ ಕಣ್ಣ ಮುಂದೆ ಕಾಣುತಿದೆ.

  ನಮಗೆಲ್ಲರಿಗು ಒಂದು ಕಡೆ ವಿಸ್ಮಯ ಕಣ್ತುಂಬಿ ಕೋಳ್ಳುವ ಹಂಬಲ ಜೊತೆಗೆ ಆ ಪಕ್ಷಿ ಪ್ರಪಂಚ ನೋಡುವ ಉತ್ಸಾಹ. ಅಲ್ಲಿನ ನೀರಿನ ಮಧ್ಯಭಾಗದಲ್ಲಿನ ಬಂಡೆ ಕಲ್ಲಿನ ಮೇಲೆ ಮೊಸಳೆಗಳು ಹಬ್ಬಾ ಯಂತಹ ದೈತ್ಯ ಜೀವಿ. ಬಂಡೆಗಳ ಮೇಲೆ ಬಾಯಿತೇರೆದು ಕೋಂಡು ಬೇಟೆಗಾಗಿ ಕಾಯುತ್ತ ಸತ್ತ ಜೀವಿಯಂತೆ ಬಿದ್ದಿರುವ ಅವುಗಳನ್ನು ನೋಡಿ ನಮಗೆಲ್ಲರಿಗು ಒಂದು ಕಡೆ ಭಯ ಮತೋಂದು ಕಡೆ ಅವುಗಳನ್ನು ನೋಡುವ ಕುತುಹಲ ಈ ಎಲ್ಲಾ ಅನುಭವದ ನಡುವೆಯೆ ನಾವು ನೀರಿನ ಸಮೀಪ ಹೋಗುತ್ತಿದ್ದಂತೆ ದೋಣಿವಿಹಾರ ನಮಗಾಗಿ ಸಿದ್ದವಾಗಿತ್ತು. ಟೀಕೆಟ್ ಪಡೆದು ದೋಣಿ ಹತ್ತಿದ ನಮಗೆ ದೋಣಿ ಚಾಲಕ ಪಕ್ಷಿಗಳ ಬಗ್ಗೆ ಪರಿಚಯಿಸುತ್ತಿದ್ದರು. “ಒಪನ್ ಬಿಲ್ ಸ್ಟಾರ್ಕ, ಪೇಂಟೆಡ್ ಬಿಲ್ ಸ್ಟಾರ್ಕ, ಕಾರ್ಮೋರೆಂಟ್, ಪೀಡ್ ಕಿಂಗ್ ಫಿಶರ್, ಪೆಲಿಕಾನ್ಸ, ಇನ್ನು ಹಲವು ಬಗೆಯ ಪಕ್ಷಿಗಳ ಬಗೆ ಮಾಹಿತಿ ನೀಡಿದರು.

  ದೋಣಿಯಲ್ಲಿ ಸಾಗುತ್ತ ನಮಗೆ ಪಕ್ಷಿಗಳನ್ನು ಅತ್ತಿರದಿಂದ ನೋಡಿ ಒಂದು ಕಡೆ ಸಂತಸ ಮತೋಂದು ಕಡೆ ಆಹಾರಕ್ಕಗಿ ಬಾಯಿ ತೆರೆದು ಕುತಿರುವ ಮೊಸಳೆಗಳ ಸಮೀಪ ದೋಣಿ ಹೋಗುತ್ತಿದ್ದಂತೆ ಎಲ್ಲರಿಗು ಭಯ ಶೂರು ಮೊಸಳೆ ಬಾಯಿ ತೆರೆದು ನಮ್ಮನೆ ನೋಡುತ್ತಿತ್ತು.

  ಒಟ್ಟಾರೆ ದೋಣಿ ವಿಹಾರದಲ್ಲಿ ಪಕ್ಷಿಗಳನ್ನು ಹತ್ತಿರದಿಂದ ನೋಡುತ್ತ ನಮ್ಮಗೆ ಖುಷಿಯ ಜೊತೆಗೆ ರೋಮಂಚನ ನಮ್ಮ ತಲೆಯ ಮೇಲೆಯೆ ಪಕ್ಷಿಗಳು ರೆಕ್ಕೆ ಬಡಿದು ಹಾರುತ್ತಿದ್ದರೆ ನಮ್ಮ ಸಂತೋಷಕ್ಕೆ ಪಾರಾವೆ ಇಲ್ಲ. ಬೆಳ್ಳಿಗ್ಗೆಯಿಂದ ಸಂಜೆಯವರೆಗು ಇದ್ದ ನಾವು ಕುತುಹಲ ತಾಳಲಾರಾದೆ ಇನೊಂದು ಬಾರಿ ದೋಣಿವಿಹಾರಕ್ಕೆ ಹೋದೆವು ಅಲ್ಲಿ ಸಂಜೆಯಾಗುತ್ತಿದ್ದಂತೆ ಎಲ್ಲಾ ಪಕ್ಷಿಗಳು ಗೂಡು ಸೇರಿಕೋಳ್ಳುತ್ತಿದ್ದವು.

  ಇಂತಹ ಪಕ್ಷಿಧಾಮಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ ಬರುವ ಪಕ್ಷಿಗಳು ಪ್ರವಾಸಿಗರನ್ನು ಆರ್ಕಶಿಸುತ್ತಿದೆ. ಜೀವನದ ಜಂಜಾಟಗಳ ನಡುವೆ ನೊಂದು ಬೇಂದ ಜೀವಗಳು ಇಲ್ಲಿಗೆ ಭೇಟಿ ನೀಡಿದರೆ ನೆಮ್ಮದಿಯ ವಾತಾವರಣ ಅನುಭವವಾಗಿ ಮನಸ್ಸಿಗೆ ಖುಷಿ ಎನಿಸುತ್ತದೆ. ರಂಗನತಿಟ್ಟು ಕೇವಲ ಪಕ್ಷಿ ಪ್ರಪಂಚವಲ್ಲದೆ ಮನರಂಜನೆಯ ತಾಣವಾಗಿದೆ. ಸಂಜೆಯವರೆಗು ಸಮಯ ಕಳೆಯುವುದೆ ನಮ್ಮ ಅರಿವಿಗೆ ಬರುವುದಿಲ್ಲ.

  -ಅನಿಲ್ ಎ.ಎಸ್.
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸಗಂಗೋತ್ರಿ ಮೈಸೂರು.

  NO COMMENTS

  LEAVE A REPLY