ಸಮಸ್ಯೆಗಳಿಂದ ಮುಕ್ತವಾಗದ ಕೊಳ್ಳೇಗಾಲ

ಸಮಸ್ಯೆಗಳಿಂದ ಮುಕ್ತವಾಗದ ಕೊಳ್ಳೇಗಾಲ

206
0
SHARE

ಸಮಸ್ಯೆಗಳಿಂದ ಮುಕ್ತವಾಗದ ಕೊಳ್ಳೇಗಾಲ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕೊಳಚೆ ಪ್ರದೇಶಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಇದರಿಂದ ರೋಗ ರುಜಿನಗಳು ಸಾಮಾನ್ಯ ಎಂಬಾಂತಾಗಿದೆ, ಈ ನಿವಾರಣೆಗೆ ಯಾರು ಸ್ಪಂದಿಸಿಲ್ಲ ಕೂಗಳತೆ ದೂರದಲ್ಲಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ, ಸಂಚಾರ ವ್ಯವಸ್ಥೆ ಸುಸ್ಥಿತಿಯಲ್ಲಿ ಇಲ್ಲ, ಸಕಾಲದಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳು, ನಿಲ್ಲದ ವನ್ಯಜೀವಿ- ಮಾನವ ಸಂಘರ್ಷ, ತುಂಬದ ಕೆರೆಗಳು, ಕೊಳ್ಳೆಗಾಲದ ಕೆರೆಗಳಲ್ಲಿ ಹೂಳ ತುಂಬಿಕೊಂಡು ನೀರು ನಿಲ್ಲುತ್ತಿಲ್ಲ. ಎಲ್ಲ ಕೆರೆಗಳ ಹೂಳುಗಳನ್ನು ತೆಗೆಸಬೇಕು ಎಂಬ ಜನರ ಬಹುದಿನದ ಬೇಡಿಕೆ ಇದುವರೆಗೂ ಈಡೇರಿಲ್ಲ, ಕೊಳ್ಳೇಗಾಲದಲ್ಲಿ ಬಹುತೇಕ ಎಲ್ಲಾ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದು ಮುಕ್ತಾಯವಾಗುವ ಯಾವ ಸೂಚನೆಗಳು ಕಾಣುತ್ತಿಲ್ಲ, ಚಾಮರಜನಗರದಲ್ಲಿದ್ದಂತೆ ದೂಳು ತುಂಬಿದ ವಾತಾವರಣದಿಂದ ರೋಗಿಗಳ ಪ್ರಮಾಣದಲ್ಲಿ ಎರಿಕೆಯಾಯಿತು ಜನರ ಬದುಕು ಇದರಿಂದ ಮತ್ತಷ್ಟು ಅಸಹನೀಯವಾಗಿದೆ, ವನ್ಯ ಪ್ರಾಣಿಗಳ ಜತೆಗಿನ ಸಂಘರ್ಷಕ್ಕೆ ಅಂತ್ಯ ಹಾಡುವ ಮಾತನ್ನು ಇಲ್ಲಿ ಯಾರು ಹೇಳುತ್ತಿಲ್ಲ, ಕಾಡಂಚಿನ ಗ್ರಾಮಗಳ ಜನರು ವನ್ಯ ಪ್ರಾಣಿಗಳ ದಾಳಿಗೆ ಒಗ್ಗಿ ಹೋಗದ್ದಾರೆ ಆನೆಗಳ ದಾಳಿ, ಕಾಡು ಹಂದಿಗಳ ಕಾಟ ಮೆರೆ ಮೀರಿದರು ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಎಂಬ ಆರೋಪ ಹೀಗೆ ಹಲವು ಸಮಸ್ಯೆಗಳ ಚಕ್ರವ್ಯೂಹದಲ್ಲಿ ಕೊಳ್ಳೇಗಾಲ ವಿಧಾನ ಕ್ಷೇತ್ರದ ಮತ್ತೊಂದು ಚುನಾವಣೆಗೆ ಎದರಾಗುತ್ತಿದೆ. ಇದು ಎಷ್ಠರಮಟ್ಟಿಗೆ ಸರಿ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕುವರೆತು ಜನ ವಿರೋಧಿಯಾಗಬಾರದು. ಅದ್ದರಿಂದ ಕೊಳ್ಳೇಗಾಲ ಕ್ಷೇತ್ರದ ಪ್ರತಿನಿಧಿಗಳು ಆದಷು ಬೇಗ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕೆಂಬುವುದು ಸಾರ್ವಜನಿಕರ ಅಭಿಪ್ರಾಯ.
-ಮಹೇಶ
ಪತ್ರಿಕೋದ್ಯಮ ವಿದ್ಯಾರ್ಥಿ
ಚಾಮರಾಜನಗರ

NO COMMENTS

LEAVE A REPLY