ಎಚ್ಚೆತ್ತ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್..!

  234
  0
  SHARE

  ಎಚ್ಚೆತ್ತ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್

  ಹಲವಾರು ವರ್ಷಗಳಿಂದ ನಾವು ಗಮನಿಸಿದ್ದ ಹಾಗೆ ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ ಮುಗಿದಾಕ್ಷಣ ಬಹಳಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದೌಡಾಯಿಸುವುದು ಇಂಜಿನಿಯರಿಂಗ್ ,ಮೆಡಿಕಲ್ ಕೋರ್ಸ್‍ಗಳ ಕಡೆಗೆ. ಇದರ ಪರಿಣಾಮವಾಗಿ ಭಾರತದಾದ್ಯಂತ ಅನೇಕಾನೇಕ ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೋಡೆಗಳಂತೆ ತಲೆಯೆತ್ತಿದವು. ಅವಶ್ಯಕತೆ ಇದ್ದೋ ,ಇಲ್ಲದೆಯೋ ಬೇಡಿಕೆಗಿಂತ ಹೆಚ್ಚಿನ ಸಂಖ್ಯೆಯ ಇಂಜಿನಿಯರಿಂಗ್ ಕಾಲೇಜುಗಳ ಪ್ರಮಾಣದಿಂದಲೋ ಅಥವಾ ದೇಶದ ಯುವಜನತೆಯನ್ನು ಕಾಡುತ್ತಿರುವ ನಿರುದ್ಯೋಗದ ಸಮಸ್ಯೆ ಇಂದಾಗಿಯೋ ,ಏನೋ ಇಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳ ‘A’ ಪ್ರಮಾಣದಲ್ಲಿ ತೀರಾ ಇಳಿಕೆ ಕಂಡಿದ್ದು, ದೇಶದಾದ್ಯಂತ ಕೆಲವು ವರ್ಷಗಳಿಂದ ಪ್ರತೀವರ್ಷ ಸುಮಾರು 80,000 ಇಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುತ್ತಿವೆ. ಇದೊಂದು ಸೂಕ್ಷ್ಮ ವಿಷಯವೇ ಸರಿ. ಇದಕ್ಕೆಲ್ಲ ಕಡಿವಾಣ ಹಾಕಲು ಎ.ಐ.ಸಿ.ಟಿ.ಇಯು ದೇಶಾದ್ಯಂತ ಸುಮಾರು 200 ಎಂಜಿನಿಯರಿಂಗ್ ಕಾಲೇಜುಗಳನ್ನು ಬಂದ್ ಮಾಡಲು ನಿರ್ಧರಿಸಿರುವುದು ಒಂದು  ಮಹತ್ವದ ನಿರ್ಧಾರವಾಗಿದೆ.
  -ರೌಷನ್.ಆರಾ
  ಪತ್ರಿಕೋದ್ಯಮ ವಿದ್ಯಾರ್ಥಿನಿ
  ಮಾನಸಗಂಗೋತ್ರಿ

  NO COMMENTS

  LEAVE A REPLY