ಮತದಾನ ನಮ್ಮ ನಿಮ್ಮೆಲ್ಲರ ಜೀವನಾಧಾರ ಹಕ್ಕು ಅದನ್ನು ಕೊಲ್ಲದಿರಿ, ಮಾರದಿರಿ… ಗಂಧದಗುಡಿ ಫೌಂಡೇಶನ್ (ರಿ.)

ಮತದಾನ ನಮ್ಮ ನಿಮ್ಮೆಲ್ಲರ ಜೀವನಾಧಾರ ಹಕ್ಕು ಅದನ್ನು ಕೊಲ್ಲದಿರಿ, ಮಾರದಿರಿ… ಗಂಧದಗುಡಿ ಫೌಂಡೇಶನ್ (ರಿ.)

563
0
SHARE

 

ಮತದಾನ ಎಂಬುದು ನಮ್ಮ ನಿಮ್ಮೆಲ್ಲರ ಸರ್ವಶ್ರೇಷ್ಟ ಹಕ್ಕು ಮತ್ತು ಕರ್ತವ್ಯ ವಾಗಿದ್ದು ,ಇದನ್ನು ಜಾತಿ ಮತ ಧರ್ಮ ಪಕ್ಷ ಎಂದು ಕೊಂಡು ಅದಕ್ಕೆ ಚ್ಯುತಿ ತರದಿರಿ ಎಂದು ಗಂಧದ ಗುಡಿ ಫೌಂಡೇಶನ್ (NGO) ಸಂಸ್ಥೆಯ ವತಿಯಿಂದ ಜಾಗೃತಿ ಪಡಿಸಲಾಯಿತು.

ಈ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮುಂಬರುವ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ಅದರಲ್ಲಿ ನಮ್ಮೆಲ್ಲರ ಕರ್ತವ್ಯವೇನು? ಎಂಬುದನ್ನು ತಿಳಿಯಪಡಿಸಲು ಗಂಧದಗುಡಿ ಯಾವರಿಂದ ಮೇಕ್ ಇಂಡಿಯಾ ವೆಲ್ತಿ (MAKE INDIA WEALTHY) ಶೀರ್ಷಿಕೆ ಯ ಮೇರೆಗೆ ನಿಮ್ಮ ಮತದಾನವನ್ನು ಮರಿಕೊಳ್ಳಬೇಡಿ ಅದನ್ನು ಕೊಲ್ಲದಿರಿ ಹಾಗೂ ಮತದಾನವನ್ನು ಕಡ್ಡಾಯವಾಗಿ ಮಾಡಿ ಎಂದು ಜಾಗೃತಿ ಮೂಡಿಸಲು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಕೆಲವು ವಿಭಾಗಗಳಲ್ಲಿ ಹಮ್ಮಿಕೊಳಲಾಗಿತ್ತು.

ಈ ಕಾರ್ಯಕ್ರಮವು ನಾವು ಭಾರತೀಯರು ಭಾರತವನ್ನು ನಾವೇ ಕಟ್ಟಬೇಕು ಅದು ಹೇಗೆ ಸಾಧ್ಯ ಎಂದರೆ ಅದು ಈ ಮತದಾನ ವನ್ನು ಮಾಡುವ ಮೂಲಕ ಸಾಧ್ಯ, ಆದ್ದರಿಂದ ನೀವೆಲ್ಲರೂ ಕಡ್ಡಾಯವಾಗಿ ತಪ್ಪದೆ ಸೂಕ್ತ ವ್ಯಕ್ತಿಗೆ ಮತ ಚಲಾಯಿಸಿ ಎಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಂಧದಗುಡಿ ಫೌಂಡೇಶನ್ಅಧ್ಯಕ್ಷರಾದ ಮೋಹನ್ ಕುಮಾರ್ ಮುಖಂಡರಾದ ಮಿಂಚು ಹಾಗೂ ಕಾರ್ಯದರ್ಶಿಗಳಾದ ಸಂಧ್ಯನಂದನ್ ಮತ್ತು ಸದಸ್ಯರುಗಳಾದ ನಂದನ್, ನಂದೀಶ್,ಅನುಷಾ ಪಕಲಿ ,ಸಂದೀಪ್ ಭಾಗವಹಿಸಿದರು.

ವರದಿ: ಸಂದೀಪ್ ಜೆ ಶನಿವಾರಸಂತೆ

NO COMMENTS

LEAVE A REPLY