ದರ್ಶನ್ ತೂಗುದೀಪ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಬಿಡುಗಡೆಗೆ ಸಿದ್ದ ವಾಗಿದ್ದು, ಅಭಿಮಾನಿ ಮನದಲ್ಲಿ ಮಂದಹಾಸ.

ದರ್ಶನ್ ತೂಗುದೀಪ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಬಿಡುಗಡೆಗೆ ಸಿದ್ದ ವಾಗಿದ್ದು, ಅಭಿಮಾನಿ ಮನದಲ್ಲಿ ಮಂದಹಾಸ.

194
0
SHARE

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಯುಗಾದಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು ಆದರೆ ಕೆಲವು ದೃಶ್ಯಗಳ ರೀಶೂಟ್, ಮತ್ತು ಗ್ರಾಫಿಕ್ ಕೆಲಸಗಳು ಬಾಕಿ ಉಳಿದಿದ್ದರಿಂದ ಯುಗಾದಿಗೆ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ.. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸದ್ಯ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ದೊರಿಯಾಗಿ ಮಾಡಲಿಯೂ ಮುಂದಾಗಿದೆ 

ಕುರುಕ್ಷೇತ್ರ ಚಿತ್ರ ಆಡಿಯೋ ಏಪ್ರಿಲ್ 22ರಂದು ರಿಲೀಸ್ ಆಗುತ್ತಿದ್ದು ಹಾಡುಗಳನ್ನ ಅದ್ಧೂರಿಯಾಗಿ ಮಾರುಕಟ್ಟೆಗೆ ತರೋದಕ್ಕೆ ನಿರ್ಮಾಪಕ ಮುನಿರತ್ನ ಭರ್ಜರಿ ಪ್ಲಾನ್ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿಯಲ್ಲಿ​ ನಗರದಲ್ಲಿ ಆಯೋಜನೆಗೊಳ್ಳಲಿರುವ ದೊಡ್ಡ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ಹಾಡುಗಳ ರಿಲೀಸ್ ಆಗಲಿದ್ದು ಈ ಸಮಾರಂಭಾದಲ್ಲಿ ಇಡೀ ಚಿತ್ರರಂಗದ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರಂತೆ. ಚಿತ್ರದ ಆಡಿಯೋ ಆಲ್ಬಮ್ ಶ್ಲೋಕಗಳು, ಕಂದಪದ್ಯಗಳು ಮತ್ತು ನಾಲ್ಕು ಪ್ರಮುಖ ಹಾಡುಗಳನ್ನು ಒಳಗೊಂಡರಲಿದೆ ಎಂದು ಮೂಲಗಳು ತಿಳಿಸಿವೆ.

ಚಿತ್ರಕ್ಕೆ ಸಂಬಂಧಪಟ್ಟ ಡಬ್ಬಿಂಗ್, ಗ್ರಾಫಿಕ್ ಕೆಲಸಗಳು ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಆಕಾಶ್ ಆಡಿಯೋದಲ್ಲಿ ಡಬ್ಬಿಂಗ್ ಕೆಲಸ ಕೂಡ ಮುಗಿದಿದೆ. ಈಗಾಗಲೇ ಚಿತ್ರ 90% ಕೆಲ್ಸಗಳು ಮುಗಿದಿದ್ದು ಬಾಕಿ ಕೆಲಸಗಳನ್ನು ಮುಗಿದ ತಕ್ಷಣ ಫೈನಲ್ ಕಾಪಿ ಸಿದ್ಧಪಡಿಸಿಕೊಂಡು ಸೆನ್ಸಾರ್ ಬೋರ್ಡ್ ಬಾಗಿಲು ತಟ್ಟಲಿದೆ ಚಿತ್ರತಂಡ. ಐಪಿಎಲ್ ಮುಗಿದ ತಕ್ಷಣ ಮೇ ತಿಂಗಳ ಮದ್ಯದಲ್ಲಿ ತೆರೆಗೆ ಬರಲಿದೆ ಎನ್ನುವುದು ಚಿತ್ರತಂಡ ಆಪ್ತವಲಯದ ಮಾತು. ಅಭಿಮಾನಿಗಳಂತೂ ಆ ದಿನ ಯಾವಾಗ ಬರುತ್ತೋ, ಯಾವಾಗ ಕುರುಕ್ಷೇತ್ರವನ್ನು ಕಣ್ಣುತುಂಬಿಕೊಳ್ಳುತ್ತೇವೋ ಅಂತ ಕಾದು ಕುಳಿತಿದ್ದಾರೆ.

ಅಂದಹಾಗೆ ಕುರುಕ್ಷೇತ್ರ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾಗಿದ್ದು ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್, ರವಿಶಂಕರ್, ಮೇಘನಾ ರಾಜ್, ಭಾರತೀ ವಿಷ್ಣುವರ್ಧನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. .ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ..ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.ವರದಿ:ಸಂದೀಪ್ ಜೆ ಶನಿವಾರಸಂತೆ

NO COMMENTS

LEAVE A REPLY