ಬಿಜೆಪಿ’ಯನ್ನು ಬೆಂಬಲಿಸಬೇಡಿ: ನಟ ಪ್ರಕಾಶ ರೈ

ಬಿಜೆಪಿ’ಯನ್ನು ಬೆಂಬಲಿಸಬೇಡಿ: ನಟ ಪ್ರಕಾಶ ರೈ

233
0
SHARE

ವಿಜಯಪುರ : ವಿಜಯಪುರ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಟ ಪ್ರಕಾಶ ರೈ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸದಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ಏಜೆಂಟ್ ಅಲ್ಲ. ಆದರೂ ಕೋಮುವಾದ ಹಿನ್ನೆಲೆಯಲ್ಲಿ  ಬಿಜೆಪಿಯನ್ನು ನೀವು ಬೆಂಬಲಿಸಬೇಡಿ ಎಂದು ಜನರಿಗೆ ಹೇಳುತ್ತೇನೆ. ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಶಾ ಪುಂಗಿ ಊದಲು ಕರ್ನಾಟಕ್ಕೆ ಬರುತ್ತಿದ್ದಾರಾ ಎಂದು ಅವರು ಈ ವೇಳೆ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಉತ್ತರ ಭಾರತದಲ್ಲಿ ಯುವ ಜನತೆ, ರೈತರು ದಂಗೆ ಎದ್ದಿದ್ದಾರೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ಬಿಜೆಪಿ ಆಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿಯೂ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ದಕ್ಷಿಣ ಭಾರತದಿಂದಲೇ ಬಿಜೆಪಿ ಕೌಂಟ್ ಡೌನ್ ಶುರುವಾಗುತ್ತದೆ ಎಂದು  ಪ್ರಕಾಶ್ ರೈ ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

NO COMMENTS

LEAVE A REPLY