ಸಿನೆಮಾ ನಾಯಕರಲ್ಲ ನಿಜ ಜೀವನ ದ ನಮ್ಮೆಲ್ಲರ ನೆಚ್ಚಿನ ನಾಯಕರು.

ಸಿನೆಮಾ ನಾಯಕರಲ್ಲ ನಿಜ ಜೀವನ ದ ನಮ್ಮೆಲ್ಲರ ನೆಚ್ಚಿನ ನಾಯಕರು.

183
0
SHARE

ಇವರಿಬ್ಬರು ಸಿನಿಮಾ ನಾಯಕರೇನಲ್ಲ ಆದರೆ ಸಿನಿಮಾ ನಾಯಕರನ್ನು ಮೀರಿಸೋ ಅಭಿಮಾನಿಬಳಗ ಇವರಿಬ್ಬರಿಗಿದೆ. ಇವರ ದಕ್ಷ, ಪ್ರಾಮಾಣಿಕ ನಡೆಗೆ ನಮ್ಮದೊಂದು ಸಲಾಂ

ಪೋಲಿಸರೆಂದರೆ ಭಯ… ಭಯ… ಭಯ!! ಇದು ಮಾತ್ರ ಈ ನಾಡಿನ ಜನರ ಮನದಲ್ಲಿ ಇದ್ದಿದ್ದು. ಅದು ಅಪರಾಧಿ ಆಗಿರಲಿ ಅಥವಾ ನಿರಪಾರಧಿಯೇ ಆಗಿರಲಿ. ಸುಖಸುಮ್ಮನೆ ನಮ್ಮ ಮೇಲೆ ಏನಾದರೂ ಕೇಸು ದಾಖಲು ಮಾಡಿ ಒಳಗೆ ಹಾಕಿ ಬಿಡುತ್ತಾರೋ ಎನ್ನುವ ಭಯ ಹೆಚ್ಚಿನವರಲ್ಲಿ ಇತ್ತು.ಆದರೆ ಪೋಲಿಸರೆಂದರೆ ಕೇವಲ ಕಳ್ಳರಿಗೆ, ಭ್ರಷ್ಟರಿಗೆ, ಕೊಲೆ ಪಾತಕಿಗಳಿಗೆ, ಅತ್ಯಾಚಾರಿಗಳಿಗೆ ಒಟ್ಟಿನಲ್ಲಿ ಹೇಳುವುದಾದರೆ ಅಪರಾಧಿಗಳಿಗೆ ಮಾತ್ರವೇ ಭಯ ಇರಬೇಕಾದದ್ದು ಎಂಬುದನ್ನು ತೋರಿಸಿಕೊಟ್ಟವರು ಈ ಎರಡು ದಕ್ಷ, ಪ್ರಾಮಾಣಿಕ ಈ ರಾಜ್ಯ ಕಂಡಂತ ಮಹಾನ್ ಪೋಲಿಸ್ ಅಧಿಕಾರಿಗಳಾದ ರವಿ ಡಿ ಚಣ್ಣನವರ್ ಹಾಗೂ ಎಸ್ಪಿ ಅಣ್ಣಾ ಮಲೈ ಅವರು…

ಇವರಿಬ್ಬರ ಕರ್ತವ್ಯ ನಿಷ್ಠೆ ಎಷ್ಟು ಪ್ರಭಾವ ಬೀರಿದೆ ಎಂದರೆ ಜನರು ಬರೀ ಸಿನಿಮಾ ನಟರಿಗೆ ಮಾತ್ರ ಅಭಿಮಾನಿಗಳಾಗುತ್ತಿದ್ದರು. ಆದರೆ ಈ ಇಬ್ಬರು ಪೋಲಿಸ್ ಅಧಿಕಾರಿಗಳು ಯಾವಾಗ ಕರ್ತವ್ಯಕ್ಜೆ ಹಾಜರಾಗುತ್ತಾರೋ ಅವತ್ತೆ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಹೊಚ್ಚಹೊಸ ಸಂಚಲನವೊಂದು ಮೂಡುತ್ತದೆ. ಇವರಿಗೆ ಜನರು ಪ್ರೀತಿಯಿಂದ ಆದರ್ಶವಾದಿಗಳು, ಕರುನಾಡ ಸಿಂಗಂ ಎಂದು ಕರೆಯುವುದುಂಟು. ಎಲ್ಲ ಪೋಲಿಸರನ್ನು ಒಂದೇ ದೃಷ್ಟಿಯಿಂದ ನೋಡುತ್ತಿದ್ದ ಜನ ಇದ್ದಕಿದ್ದಂತೆ ಪೋಲಿಸರಿಗೆ ಅಭಿಮಾನಿಯಾಗುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಕರ್ತವ್ಯ ನಿಷ್ಠೆಯ ಬಗ್ಗೆ ವ್ಯಾಪಕ ಪ್ರಶಂಸೆ… ಇವರಿಬ್ಬರ ವಿಶೇಷತೆಯೆಂದರೆ ಇವರು ಎಂಥ ರಾಜಕಾರಣಿಗಳಿಗೂ ಜಗ್ಗುವುದಿಲ್ಲ. ಸಣ್ಣಪುಟ್ಟ ತಪ್ಪುಗಳಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಪ್ರೀತಿಯಿಂದ ಸಲಹೆಗಳನ್ನು ನೀಡುತ್ತಾರೆ. ಇವರಿಬ್ಬರ ಕರ್ತವ್ಯ ನಿಷ್ಠೆಗೆ ಶರಣಾದ ಅದೆಷ್ಟೋ ಕೆಟ್ಟು ಹೋದ ಯುವ ಸಮೂಹವು ಬದಲಾಗಿದೆ. ಇಂತಹ ಸಮಾಜವನ್ನು ತಿದ್ದುವ ದಕ್ಷ ಅಧಿಕಾರಿಗಳು ಇನ್ನಷ್ಟು ಹುಟ್ಟಿ ಬರಲಿ ಎಂಬುದು ನಮ್ಮ ಹಾರೈಕೆ…

ಸಂದೀಪ್ ಶನಿವಾರಸಂತೆ

 

NO COMMENTS

LEAVE A REPLY