ಎಕ್ಸೆಲ್ ಪ್ಲಾಂಟ್ ವಾಸನೆಯಿಂದ ಮುಕ್ತಿ . ಶಾಸಕ ಎಂ.ಕೆ ಸೋಮಶೇಖರ್ ರವರಿಗೆ ಅಭಿನಂದನೆ .

ಎಕ್ಸೆಲ್ ಪ್ಲಾಂಟ್ ವಾಸನೆಯಿಂದ ಮುಕ್ತಿ . ಶಾಸಕ ಎಂ.ಕೆ ಸೋಮಶೇಖರ್ ರವರಿಗೆ ಅಭಿನಂದನೆ .

273
0
SHARE

 

ವಿದ್ಯಾರಣ್ಯಪುರಂ ,ಜೆ ಪಿ ನಗರ,ಕನಕಗಿರಿ ಗುಂಡೂರಾವ್ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳು ಹಲವಾರು ವರ್ಷಗಳಿಂದ ಅನುಭವಿಸುತ್ತಿದ್ದ,ಎಕ್ಸೆಲ್ ಪ್ಲಾಂಟ್ ವಾಸನೆ ಮತ್ತು ಅದರಿಂದ ಉಂಟಾಗುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ದೊರೆಯುವ ಸಮಯ ಬಂದಿದೆ.

ಶಾಸಕರಾದ ಎಂ.ಕೆ ಸೋಮಶೇಖರ್ ರವರ ಸತತ ಹೋರಾಟ ಫಲವಾಗಿ ಕೆಸರೆಯಲ್ಲಿ 200 ಟಿ ಪಿ ಟಿ (ನಿತ್ಯ 200 ಟನ್ ಸಾಮರ್ಥ್ಯದ) ಹಾಗೂ ರಾಮ ನಗರ ಕರೆಯಲ್ಲಿ 150 ಟಿ ಪಿ ಟಿ (ನಿತ್ಯ 150 ಟನ್ ಸಾಮರ್ಥ್ಯದ )
ಎರೆಡು ಹೊಸ ಎಕ್ಸೆಲ್ ಪ್ಲಾಂಟ್ ಗೆ ದಿನಾಂಕ 02-04-2018 ರಂದು State level Environment Impact Assossment Authority -Karnataka ಆದೇಶ ಸಂಖ್ಯೆ SEIAA 21 IND. 2016 ದಿನಾಂಕ 02-04-2018 ರ ಪ್ರಕಾರ ಅನುಮತಿ ದೊರೆತಿದೆ ಇದು ಸಧ್ಯದಲ್ಲೇ ಕಾರ್ಯಾಗಾರಕ್ಕೆ ಬರಲಿದೆ.ಇನ್ನು ಮುಂದೆ ಬರುವ ಕಸವನ್ನು ಹೊಸ ಘಟಕಗಳಾದ ಕೆಸರೆ ಮತ್ತು ರಾಮನ ಕೆರೆಗೆ ವಿಲೇವಾರಿ ಮಾಡಲಾಗುತ್ತದೆ

ಈವಿಷಯವಾಗಿ ವಿದ್ಯಾರಣ್ಯಪುರಂ ,ಜೆ ಪಿ ನಗರ,ಕನಕಗಿರಿ ಗುಂಡೂರಾವ್ ನಗರ ದ ಎಕ್ಸೆಲ್ ಪ್ಲಾಂಟ್ ವಾಸನೆಯಿಂದ ಮುಕ್ತಿ ಈ ಭಾಗದ ಎಲ್ಲ ಜನರಿಗೂ ಸಂಘ ಸಂಸ್ಥೆಗಳ, ವಿದ್ಯಾ ಸಂಸ್ಥೆಗಳ ಬೇಡಿಕೆಗೆ ಜಯ ಸಿಕ್ಕಂತಾಗಿದೆ.

ಈ ಮೇಲ್ಕಂಡ ಹೊಸ ಘಟಕ ಪ್ರಾರಂಭಕ್ಕೆ ಸತತವಾಗಿ ಶ್ರಮವಹಿಸಿ ,ನಿತ್ಯ ಅನುಮತಿಗಾಗಿ ಕಡತಗಳ ಹಿಂದೆಯೇ ಓಡಾಡಿ ಸರ್ಕಾರದ ನಗರಾಭಿವೃದ್ದಿ ಇಲಾಖೆ ,ಪೌರಾಡಳಿತ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದುತಂದ ಶಾಸಕರಾದ ಎಂ.ಕೆ ಸೋಮಶೇಖರ್ ರವರಿಗೆ ಅಭಿಂದನೆಗಳನ್ನು ಇಂದು ಸಾರ್ವಜನಿಕರು ವ್ಯಕ್ತ ಪಡಿಸಿದರು.

ವರದಿ:ಸಂದೀಪ್ ಶನಿವಾರಸಂತೆ.

NO COMMENTS

LEAVE A REPLY