ದಲಿತರ ಮೇಲಿನ ಶೋಷಣೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ದಲಿತರ ಮೇಲಿನ ಶೋಷಣೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

500
0
SHARE

ಮೈಸೂರು(3.04.2018);ಎಸ್ಸಿ/ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಇತ್ತೀಚಿಗೆ ನೀಡಿದ ತೀರ್ಪನ್ನ ಖಂಡಿಸಿ, ನೆನ್ನೆ ವಿವಿಧ ದಲಿತಪರ ಸಂಘಟನೆಗಳ ಪ್ರತಿಭಟನೆಯೂ ಹಿಂಸಾಚಾರ ಪಡೆದುಕೊಂಡು 9 ಮಂದಿ ಸಾವನ್ನಪ್ಪದರು. ಇದರ ಪರಿಣಾಮವಾಗಿ ಮೈಸೂರು ವಿವಿ ಮಾನಸ ಗಂಗೋತ್ರಿಯ ವಿದ್ಯಾರ್ಥಿ ಒಕ್ಕೂಟ ಇಂದು ಕ್ಲಾಕ್ ಟವರ್ ಬಳಿ ಪ್ರತಿಭಟನೆ ಮಾಡಲಾಯಿತು.

ಈ ಕುರಿತು ಸುಪ್ರಿಂಕೋರ್ಟ್ ತೀರ್ಪಿನಿಂದ ದಲಿತರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ದಕ್ಕೆಯಾಗುತ್ತಿದೆ. ಹಾಗೂ ದಲಿತರ ರಕ್ಷಣೆಗೆ ಕೇಂದ್ರ ಸರ್ಕಾರವು ಯಾವುದೇ ರೀತಿಯಾ ಬೆಂಬಲವನ್ನು ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ಕೈಗೊಂಡ ವಿದ್ಯಾರ್ಥಿಗಳು ಟಮಟೆಯನ್ನು ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಶೋಧಕ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ ಎಸ್. ಹಿರಿಯವಿದ್ಯಾರ್ಥಿ ಮಹೇಶ್ ಸೋಸಲೆ, ಗುರುಮೂರ್ತಿ, ಅರುಣ್‍ಕುಮಾರ್. ಪ್ರಸಾದ್. ಮನು ಮಾವಿನಹಳ್ಳಿ, ಹಾಗೂ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಪವನ್‍ಕುಮಾರ್ ಭಾಗವಹಿಸಿದ್ದರು.

ವರದಿ- ಮಹೇಶ್ .ವಿ

NO COMMENTS

LEAVE A REPLY