ಮತದಾರರಿಗೆ ಆಮಿಷ ನೀಡಿ ಹಂಚಲು ತಂದಿದ್ದ ವಸ್ತುಗಳು ವಶ..

ಮತದಾರರಿಗೆ ಆಮಿಷ ನೀಡಿ ಹಂಚಲು ತಂದಿದ್ದ ವಸ್ತುಗಳು ವಶ..

168
0
SHARE

ಬೆಂಗಳೂರು(ಏ.1.5.2018):ವಿಧಾನಸಭಾ ಚುನಾವಣೆ ಮತದಾರರಿಗೆ ಆಮಿಷ ನೀಡಲು ಹಂಚಲು ತಂದಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆಯ ಮನೆಯೊಂದರ ಮೇಲೆ ದಾಳಿ ನಡೆಸಿ, ಸಂಗ್ರಹಿಸಿಟ್ಟಿದ್ದ ಸೀರೆಗಳ ಮೂಟೆ, ಕುಕ್ಕರ್, ವಾಟರ್ ಕ್ಯಾನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಸೀರೆಗಳ ಪ್ಯಾಕ್‌ಗಳ ಮೇಲೆ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ಭಾವಚಿತ್ರಗಳಿವೆ.

ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ದಾಳಿ ನಡೆಸಿದ್ದು 5 ಪ್ರತ್ಯೇಕ ಸ್ಥಳಗಳಲ್ಲಿ ಕೂಡಿಡಲಾಗಿದ್ದ ಸೀರೆಗಳು, ಕುಕ್ಕರ್‌, ಮಿಕ್ಸರ್‌ ಮತ್ತು ವಾಟರ್‌ ಕ್ಯಾನ್‌ಗಳನ್ನು ಜಪ್ತಿ ಮಾಡಲಾಗಿದೆ.

ಡಿಸಿಪಿ ಚೇತನ್‌ ಸಿಂಗ್‌ ರಾಠೊಡ್‌ ಮತ್ತಿತರ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿಗಳ ದೂರಿನ ಆಧಾರದ ಮೇಲೆ ಮನೆಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

NO COMMENTS

LEAVE A REPLY