ಇಂದು ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ 111 ನೇ ಹುಟ್ಟುಹಬ್ಬದ ಸಂಭ್ರಮ..

ಇಂದು ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ 111 ನೇ ಹುಟ್ಟುಹಬ್ಬದ ಸಂಭ್ರಮ..

206
0
SHARE

ತುಮಕೂರು : ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಶ್ರೀಗಳ 111ನೇ ಜನ್ಮ ದಿನೋತ್ಸವ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಶ್ರೀಗಳ ಹುಟ್ಟುಹಬ್ಬದ ಹಿನ್ನೆಲೆ  ಮಠದಲ್ಲಿ ಹಬ್ಬದ ವಾತಾವರಣವಿದೆ. ಶ್ರೀಗಳ ದರ್ಶನಕ್ಕಾಗಿ ಮಠಕ್ಕೆ ಜನಸಾಗರವೇ ಹರಿದುಬರುತ್ತಿದೆ.

ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಗುರುವಂದನಾ ಕಾರ್ಯಕ್ರಮದಲ್ಲಿ ಸುತ್ತೂರು ಸ್ವಾಮೀಜಿ, ಮುರುಘಾ ಮಠದ ಸ್ವಾಮೀಜಿ ಸೇರಿದಂತೆ ವಿವಿದ ಮಠಗಳ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಸ್ವಾಮೀಜಿಗಳೆಲ್ಲಾ ಸಿದ್ದಗಂಗಾ ಶ್ರೀಗಳಿಗೆ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಲಿದ್ದಾರೆ.

ಶ್ರೀಗಳ ಹುಟ್ಟುಹಬ್ಬಕ್ಕೆ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ದತೆ ನಡೆದಿದ್ದು, ಮಠದಲ್ಲಿ ಸುಮಾರು ಒಂದೂವರೆ ಲಕ್ಷ ಭಕ್ತಾಧಿಗಳು ಮಠಕ್ಕೆ ಬರುವ ನಿರೀಕ್ಷೆ ಇದೆ. ಮಠಕ್ಕೆ ಬರುವ ಭಕ್ತಾಧಿಗಳಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿರುವ ಸಿದ್ದಗಂಗಾ ಮಠದ ಆಡಳಿತ ಮಂಡಳಿ, ಒಂಭತ್ತು ಸ್ಥಳಗಳಲ್ಲಿ ಊಟದ ವ್ಯವಸ್ಥೆ ಕಲ್ಪಿಸಿದೆ.

ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು , ಕೇಸರಿಬಾತು, ಮಧ್ಯಾನ್ಹದ ಭೋಜನಕ್ಕೆ ಚಿತ್ರಾನ್ನ, ಕೋಸಂಬರಿ, ಅನ್ನ ಸಾರು, ಪಲ್ಯಗಳು, ಪಾಯಸ , ಸಿಹಿ ಮತ್ತು ಕಾರ ಬೂಂದಿ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳಿಗೆ ಸಿಹಿ ಹಂಚಲು 250 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

NO COMMENTS

LEAVE A REPLY