ನನ್ನ ಕಂಡರೆ ಅಮಿತ್ ‌ಶಾಗೆ ಭಯ: ಸಿಎಂ ಸಿದ್ದರಾಮಯ್ಯ

ನನ್ನ ಕಂಡರೆ ಅಮಿತ್ ‌ಶಾಗೆ ಭಯ: ಸಿಎಂ ಸಿದ್ದರಾಮಯ್ಯ

239
0
SHARE

ಮೈಸೂರು (ಮಾ. 29.2018):  ನನ್ನ ಕಂಡರೆ ಅಮಿತ್ ‌ಶಾಗೆ ಭಯ. ಹಾಗಾಗಿ ನಾನೂ ಹೋದಲೆಲ್ಲ ಅಮಿತ್ ಶಾ ಹಿಂಬಾಲಿಸುತ್ತಿದ್ದಾರೆ ಎಂದು  ಮೈಸೂರಿನಲ್ಲಿ  ಅಮಿತ್ ಶಾ ವಿರುದ್ಧ ಸಿಎಂ ವ್ಯಂಗ್ಯವಾಡಿದ್ದಾರೆ. 

ಅವರು ಮಠಕ್ಕಾದರೂ ಹೋಗಲಿ, ಎಲ್ಲಿಗೆ ಬೇಕಾದರೂ ಹೋಗಲಿ. ಅದು ಅವರ ವೈಯಕ್ತಿಕ ಸ್ವಾತಂತ್ರ್ಯ.  ಆ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ. ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇಳ್ತಾರೆ‌. ಅಮಿತ್ ಶಾ ಜೈನ ಧರ್ಮದವರು.  ಅವರು ಹಿಂದೂನಾ ಅಥವಾ ಅಹಿಂದುನಾ ಅಂತ ಸ್ಪಷ್ಟಪಡಿಸಲಿ ಎಂದಿದ್ದಾರೆ. 

ಬೈ ಎಲೆಕ್ಷನ್’ನಲ್ಲಿ  ಯಡಿಯೂರಪ್ಪ ಸೇರಿ ಎಲ್ಲರೂ ಬಂದಿದ್ದರು.  ಉಪ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂದಿದ್ದರು.  ಆದರೆ ಗೆದ್ದಿದ್ದು ಯಾರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ.  ಜೈಲಿಗೆ ಹೋಗಿ ಬಂದವರೆಲ್ಲ ನನಗೆ ಪಾಠ ಹೇಳಿ ಕೊಡ್ತಾರಾ.? ಎಂದು ಬಿಎಸ್’ವೈ  ವಿರುದ್ಧವೂ  ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

NO COMMENTS

LEAVE A REPLY