ಕನ್ನಡ ಚಿತ್ರರಂಗದಲ್ಲಿ 8 ಪ್ಯಾಕ್ಸ್ಸ ಸರದಾರ ವಿನೋದ್ ಪ್ರಭಾಕರ್

ಕನ್ನಡ ಚಿತ್ರರಂಗದಲ್ಲಿ 8 ಪ್ಯಾಕ್ಸ್ಸ ಸರದಾರ ವಿನೋದ್ ಪ್ರಭಾಕರ್

211
0
SHARE

ಕನ್ನಡದ ಅರ್ನಾಲ್ಡ್ ವಿನೋದ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ 8 ಪ್ಯಾಕ್ಸ್ ಬಾಡಿ ಬಿಲ್ಡ್ ಮಾಡಿರುವ ಏಕೈಕ ನಟ ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್”

ವಿನೋದ್ ಪ್ರಭಾಕರ್ ತಂದೆಯಂತೆ ಒಬ್ಬ ಒಳ್ಳೆಯ ನಟ ಅಷ್ಟೇ ಅಲ್ಲ ಸರಳ ಸಜ್ಜನಿಕೆಯಲ್ಲಿ ತುಂಬಾ ಪ್ರಾಮಾಣಿಕ ವ್ಯಕ್ತಿ.

ಈಗ ಇದೆಲ್ಲದಕ್ಕೂ ಒಂದು ಹೆಜ್ಜೆ ಮುಂದಿರುವ ವಿನೋದ್ ಸುಮಾರು ಆರು ತಿಂಗಳಿಂದ ದೇಹವನ್ನು ದಂಡಿಸಿ ಯಾವುದೇ ಜೌಷದಿ ಸ್ಟೀರಾಯ್ಡ್ ಗಳ ಸಹಾಯವಿಲ್ಲದೇ ದೇಹವನ್ನು ದಂಡಿಸಿ ಸುಂದರವಾಗಿ 8 ಪ್ಯಾಕ್ಸ್ ಮಾಡಿದ್ದಾರೆ.ಇದು ರಗಡ್ ಚಿತ್ರಕ್ಕಾಗಿ ವಿನೋದ್ ತಮ್ಮ ಸ್ವಂತ ಕರ್ಚಿನಿಂದ ಹಾಗೂ ಸ್ವಂತ ಆಸಕ್ತಿಯಿಂದ ಬಾಡಿ ಬಿಲ್ಡ್ ಮಾಡಿದ್ದಾರೆ.

ಕನ್ನಡಿಗರು ಕೂಡ ಹೆಮ್ಮೆಯಿಂದ ಹೇಳಿಕೊಳ್ಳಬಹುದು  ನಮ್ಮಲ್ಲೂ ಒಬ್ಬ ಅರ್ನಾಲ್ಡ್‌ ಇದ್ದಾನೆ ಎಂದು. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎನ್ನುವುದಕ್ಕೆ ಸಾಕ್ಷಿಯಾಗಿ ಅವರ ಶ್ರೀಮತಿ ನಿಷಾ ವಿನೋದ್ ಬೆನ್ನ ಹಿಂದೆ ನಿಂತು ಸಾತ್ ನೀಡಿದ್ದಾರೆ.
ವಿನೋದ್ ರವರ ಬಾಡಿ ಬಿಲ್ಡ್ ನ ಫೋಟೋ ಶೂಟ್ ಗಿರಿಧರ್ ದಿವಾನ್ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಹಾಗೇ ವಿನೋದ್ ರವರ ಬಾಡಿಬಿಲ್ಡ್ ಟ್ರೈನರ್ ಆಗಿ ಪ್ರದೀಪ್ ಜವಾಬ್ದಾರಿ ಹೊತ್ತು ಅವರು ಕೂಡ ಈ ಮೂಲಕ ಯಶಸ್ವಿಯಾಗಿದ್ದಾರೆ.
ಒಟ್ಟಿನಲ್ಲಿ ವಿನೋದ್ ಪ್ರಭಾಕರ್ ಅಂತರಾಷ್ಟ್ರೀಯ ಮಟ್ಟದ ಜಾಹಿರಾತುಗಳಲ್ಲಿ ಮಿಂಚಲಿ ಎಂಬುದು ನಮ್ಮೆಲ್ಲರ ಪ್ರೀತಿಪೂರ್ವಕ ಆಶಯ.

-ಸಂದೀಪ್ ಶನಿವಾರಸಂತೆ

NO COMMENTS

LEAVE A REPLY