ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪ್ರೊ.ಸಿ.ಬಸವರಾಜು

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪ್ರೊ.ಸಿ.ಬಸವರಾಜು

267
0
SHARE

ಮೈಸೂರು(ಮಾ.26.2018):ಪರಿಸರ ಉಳಿಸಿ ಪ್ರಾಣಿ ಪಕ್ಷಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪರಿಸರದ ಅಂಗಿಲ್ಲದೆ ಯಾವ ಜೀವಿಗಳು ಬದುಕಲು ಸಾಧ್ಯವಿಲ್ಲ.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮೈಸೂರು ವಿವಿಯ ಪ್ರಭಾರ ಕುಲಪತಿಗಳಾದ ಪ್ರೊ.ಸಿ.ಬಸವರಾಜು ಹೇಳಿದರು.

ಮೈಸೂರಿನ ಕುಕ್ಕರಳ್ಳಿ ಕೆರೆಯಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ 25 ಭಾನುವಾರ ಮುಂಜಾನೆ 7 ಕ್ಕೆ ಆಯೋಜಿಸಿದ ಪೋಟೋ ಪ್ರದರ್ಶನ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುಕ್ಕರಳ್ಳಿ ಕೆರೆಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಾವು ಸಹಕರಿಸುತ್ತೇವೆ. ಇಲ್ಲಿ ಮುಚ್ಚಿರುವ ಶೌಚಾಲಯವನ್ನು ತೆರೆಸುವುದಾಗಿ ಭರವಸೆ ನೀಡಿದರು. ರಾತ್ರಿ ವೇಳೆ ಸೆವಕ್ಯುರಿಟಿಗಳಿಗೆ ಕೆರೆಯ ಭದ್ರತೆಯಾಗಿರಿಸಲು ತಿಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಕುಕ್ಕರಳ್ಳಿ ಕೆರೆಯು ಪುರಾತನದ್ದು. ಇಲ್ಲಿ 190 ಬಗೆ ಪಕ್ಷಿಗಳಿವೆ. ಇತಿಹಾಸ ಸಾರುವ ಈ ಕೆರೆಯು ಕುವೆಂಪು ರಂತಹ ಹಲವು ಕವಿಗಳ ಬರಹಕ್ಕೆ ಸ್ಪೂರ್ತಿಯಾಗಿದೆ. ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಈ ಯೋಜನೆಯನ್ನು ಪ್ರತಿ ವರ್ಷ ಹಬ್ಬದಂತೆ ಆಚರಿಸೋಣ ಎನ್ನುವ ಉದ್ದೇಶದಿಂದ ಸ್ವಯಂ ಸಂಘಟಿತರಾಗಿ ಈ ಸ್ವಚ್ಛತಾ ಅಭಿಯಾನವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಪರಿಕ್ಷಾಂಗ ವಿಭಾಗದ ಪ್ರೊ. ಜೆ. ಸೋಮಶೇಖರ್, ಇ.ಎಮ್.ಆರ್.ಸಿಯ ನಿರ್ದೇಶಕ ಪ್ರೊ.ಎಮ್.ಆರ್.ಗಂಗಾಧರ್ ಹಾಗೂ ಕಾರ್ಯಕ್ರಮದ ರುವಾರಿ ಸಂಘಟನಾಕಾರರು ಇದ್ದರು‌.

ಕುಕ್ಕರಳ್ಳಿ ಕೆರೆಯಲ್ಲಿ ತೆಗೆದ 120 ಪೋಟೋಗಳ ಪ್ರದರ್ಶನವನ್ನು ಬೆಳ್ಳಗೆ 7 ರಿಂದ 10 ಘಂಟೆವರೆಗೆ ಹಾಗೂ ಸಂಜೆ 4:30 ಯಿಂದ 7 ಘಂಟೆವರೆಗೆ ಸಾರ್ವಜನಿಕರು ನೋಡಲು ಅವಕಾಶ ಒದಗಿಸಲಾಯಿತು.
ವರದಿ– ಕಾವ್ಯ ಸಿ.ಪಿ.ಆಚಾರ್ಯ
ಪತ್ರಿಕೋದ್ಯಮ ವಿಭಾಗ
ಮೈಸೂರು

NO COMMENTS

LEAVE A REPLY