ಸಂಗೀತ ಸಂಜೆಗೆ ಮೆರುಗು ತಂದ ಚಂದನ್ ಶೆಟ್ಟಿ..

ಸಂಗೀತ ಸಂಜೆಗೆ ಮೆರುಗು ತಂದ ಚಂದನ್ ಶೆಟ್ಟಿ..

511
0
SHARE

ಮೈಸೂರು(ಮಾ.25.2018):ಮೊದಲ ಲೈವ್ ಕಾನ್ಸರ್ಟ್ ನೀಡುವ ಮೂಲಕ ಜನರ ಹರ್ಷೋದ್ಗಾರದ ಶಿಳ್ಳೆಗಳ ಕಂಪನಕ್ಕೆ ಸಾಕ್ಷಿಯಾದ ಬಿಗ್ ಬಾಸ್ ಸೀಸನ್-೫ ರ ವಿಜೇತ ಚಂದನ್ ಶೆಟ್ಟಿ ತಮ್ಮ ಸಂಗೀತ ಸಂಜೆಯಲ್ಲಿ ಗೀತಗಾಯನದ ಮೆರುಗು ಹೆಚ್ಚಿಸಿದರು.

ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿ ಮಾ. 24ರಂದು “ನೇತ್ರದಾನ ಮಹಾದಾನ” ಎಂಬುದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬಿಗ್ ಬಾಸ್ ಸೀಸನ್-೫ ರ ವಿಜೇತ ಚಂದನ್ ಶೆಟ್ಟಿಯವರಿಂದ ಸಂಗೀತ ರಸ ಸಂಜೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಆಗಮಿಸಿದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರವರು ಚಂದನ್ ರೊಂದಿಗೆ ‘ಬೆಸ್ಟಪ್ರೆಂಢ್’ ಗೀತೆಯನ್ನು ಹಾಡಿದ್ದು ವಿಶೇಷವೆನಿಸಿತು. ಹಾಗೆ ರಾಜ್ಯಾದ್ಯಂತ ಪ್ರಖ್ಯಾತಿಗೊಂಡ ಗೊಂಬೆ ಗೊಂಬೆ  ಹಾಡನ್ನು ನಿವೇದಿತಾರಿಗೋಸ್ಕರ ಚಂದನ್ ಶೆಟ್ಟಿ ಹಾಡಿದ್ದು ಕೇಳುಗರಿಗೆ ಇಂಪಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಗ್ ಬಾಸ್ ಸೀಸನ್-೫ ರ ರನ್ನರ್ ಅಪ್ ಆದ ದಿವಾಕರ್ ಗೋಸ್ಕರ ‘ಅದ್ಬುತ ಅತ್ಯಧ್ಬುತ’ ಗೀತೆಯನ್ನು ಹಾಡುವುದರೊಂದಿಗೆ ತಮ್ಮ ಬಿಗ್ ಬಾಸ್ ಜರ್ನಿಯನ್ನು ಚಂದನ್ ಶೆಟ್ಟಿ ನೆನಪಿಸಿಕೊಂಡರು.

ಈ ಸಂಗೀತ ರಸ ಸಂಜೆಗೆ ಸಾಕ್ಷಿಯಾದ ಮೈಸೂರು ವಿವಿಯ ಪ್ರಬಾರ ಕುಲಪತಿಗಳಾದ ಪ್ರೊ.ಸಿ ಬಸವರಾಜು, ಪ್ರೊ.ಕೆ. ಎಸ್ ರಂಗಪ್ಪ, ನಂದನಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಸಂಗೀತದ ಹೊನಲಿನಲ್ಲಿ ಮುಳುಗಿದ್ದರು. ಹಾಗೆಯೇ ಚಂದನ್ ಶೆಟ್ಟಿಯು ಸೇರಿದಂತೆ ಅಥಿತಿಗಳೆಲ್ಲರು ನೇತ್ರದಾನ ಮಾಡಲು ತಮ್ಮ ಹೆಸರನ್ನು ನೊಂದಯಿಸಿಕೊಂಡು ಕಾರ್ಯಕ್ರಮದ ಉದ್ದೇಶವನ್ನು ಹಿಡೇರಿಸುವಲ್ಲಿ ಸಾಕ್ಷಿಯಾದರು.

ಚಂದನ್ ಶೆಟ್ಟಿ ರವರು ಸಂಗೀತ ಸಂಜೆಯಲ್ಲಿ ಟಕೀಲಾ, ಚಾಕೊಲೇಟ್ ಗರ್ಲ್, ಮೂರೇ ಮೂರು ಪೆಗ್ಗಿಗೆ ಹಾಡುಗಳೊಂದಿಗೆ ಪ್ರೇಕ್ಷಕರ ಮನಸ್ಸಂತೋಷವನ್ನು ನಲಿಸಿದರು.
ವರದಿಕಾವ್ಯ ಸಿ.ಪಿ.ಆಚಾರ್ಯ
            ಪತ್ರಿಕೋದ್ಯಮ ವಿಭಾಗ
            ಮೈಸೂರು.

ಛಾಯಾಚಿತ್ರ: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY