ಗಂಗೋತ್ರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ:ಸುನೀಲ್ ಬೋಸ್ ಉದ್ಘಾಟನೆ

ಗಂಗೋತ್ರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ:ಸುನೀಲ್ ಬೋಸ್ ಉದ್ಘಾಟನೆ

1318
0
SHARE

ಮೈಸೂರು(ಮಾ.20.2018): ಮಾನಸ ಗಂಗೋತ್ರಿಯಲ್ಲಿ ಮೈಸೂರು ವಿವಿ ವಿದ್ಯಾರ್ಥಿ ಒಕ್ಕೂಟದಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಸುನೀಲ್ ಬೋಸ್ ರವರು ಉದ್ಘಾಟನೆ ಮಾಡಿದರು.

ಸಂಪಾದಕ ದಿ. ರಾಜಶೇಖರ ಕೋಟಿ ಹಾಗೂ ರೈತನಾಯಕ ದಿ.ಪುಟ್ಟಣ್ಣಯ್ಯರವರ ಸ್ಮರಣಾರ್ಥವಾಗಿ ಮತ್ತು ಭೀಮ ಕೊರೆಂಗಾವ್-200 ರ ಆಚರಣೆಗಾಗಿ ಗಂಗೋತ್ರಿ ಮೈದಾನದಲ್ಲಿ ಏರ್ಪಡಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಟಿ.ನರಸಿಪುರ ಕ್ಷೇತ್ರದ ಅಂಬೇಡ್ಕರ್ ವಸತಿ ಮತ್ತು ಜಾಗೃತಿ ಸಮಿತಿ ಅಧ್ಯಕ್ಷರಾದ ಸುನೀಲ್ ಬೋಸ್ ರವರು ತಮ್ಮ ಅಮೃತಾಸ್ತದಿಂದ ಬ್ಯಾಟಿಂಗ್ ಆಡುವ ಮೂಲಕ ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಆಪ್ತರಾದ ಶಿವಕುಮಾರ್ ಬೋಸ್, ಹಿರಿಯ ವಿದ್ಯಾರ್ಥಿ ಮಹೇಶ್ ಸೊಸಲೆ, ಸಂಶೋಧನಾ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ ಮತ್ತು ಕ್ರಿಡಾಪಟುಗಳು ಉಪಸ್ಥಿತರಿದ್ದರು. 

                      –ವರದಿ: ಶಂಕರ್. ಜಿ ಬೋಸ್

NO COMMENTS

LEAVE A REPLY