ಸಿಎಂ ಮಣಿಸಲು ಮೈಸೂರಿನಲ್ಲಿ ಬಿಜೆಪಿ ಹೊಸ ತಂತ್ರಗಾರಿಕೆ..!

ಸಿಎಂ ಮಣಿಸಲು ಮೈಸೂರಿನಲ್ಲಿ ಬಿಜೆಪಿ ಹೊಸ ತಂತ್ರಗಾರಿಕೆ..!

235
0
SHARE

ಮೈಸೂರು(ಮಾ.17.2018): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಮಣಿಸಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದ್ದು, ಈ ಕುರಿತು ಕಾರ್ಯತಂತ್ರ ರೂಪಿಸಲು ಬಿಜೆಪಿ ಮುಖಂಡರು ಸಭೆ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಂಟ, ಉತ್ತರ ಪ್ರದೇಶದ ಮೀರತ್ ಸಂಸದ ರಾಜೇಂದ್ರ ಅಗರವಾಲ್ ನೇತೃತ್ವದಲ್ಲಿ ಕನಕದಾಸ ನಗರದ ಆಚಾರ್ಯ ಸಭಾ ಭವನದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆ ನಡೆಯಿತು.  ಸಿಎಂ ಸಿದ್ದರಾಮಯ್ಯರನ್ನು  ಮಣಿಸಲು ಚುನಾವಣೆ ಘೋಷಣೆಗೂ ಮುನ್ನವೇ ಕಾರ್ಯತಂತ್ರದ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಗಾಗಿ ಪೂರ್ವಭಾವಿ ಸಭೆ ನಡೆದಿದ್ದು ಸಭೆಯಲ್ಲಿ  ಸಂಸದ ಪ್ರತಾಪ್ ಸಿಂಹ, ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರಾದ ಅಪ್ಪಣ್ಣ, ಹೇಮಂತ್ ಕುಮಾರ್ ಗೌಡ, ಅರುಣ್ ಕುಮಾರ್ ಭಾಗಿಯಾಗಿದ್ದರು. ಜತೆಗೆ ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಪ್ರಭಾರಿಗಳಾದ ಮೈ.ವಿ.ರವಿಶಂಕರ್, ಫಣೀಶ್, ಎಲ್.ನಾಗೇಂದ್ರ ಮುಂತಾದರು ಉಪಸ್ಥಿತರಿದ್ದರು.

NO COMMENTS

LEAVE A REPLY