ನೇತ್ರದಾನ ಜಾಗೃತಿ ಮೂಡಿಸಲು ಚಂದನ್ ಶೆಟ್ಟಿ ಸಂಗೀತ ಸಂಜೆ

ನೇತ್ರದಾನ ಜಾಗೃತಿ ಮೂಡಿಸಲು ಚಂದನ್ ಶೆಟ್ಟಿ ಸಂಗೀತ ಸಂಜೆ

257
0
SHARE

ಮೈಸೂರು (ಮಾ.15.2018): ನೇತ್ರದಾನ ಮಹಾದಾನ ಎಂಬಂತೆ ಜನರಲ್ಲಿ ಜಾಗೃತಿ ಮೂಡಿಸಲು ಬಿಗ್ ಬಾಸ್ ಸೀಸನ್-5 ನ ವಿಜೇತ ಚಂದನ್ ಶೆಟ್ಟಿಯವರ ಸಂಗೀತ ಸಂಜೆಯನ್ನು ಮಾ.24ರಂದು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಈ ಕುರಿತು ಮಾತನಾಡಿದ ವಿಶ್ರಾಂತ ಕುಲಪತಿ ಪ್ರೋ ಕೆ.ಎಸ್ ರಂಗಪ್ಪರವರು, ಎಲ್ಲಾ ದಾನಕ್ಕಿಂತ ನೇತ್ರದಾನ ಶ್ರೇಷ್ಠವಾದದು, ನಾವು ನೇತ್ರದಾನ ಮಾಡಿದರೆ ಒಬ್ಬರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೇತ್ರದಾನಕ್ಕೆ ಮುಂದಾಗಿ ಎಂದು ಸೂಚನೆ ನೀಡಿದರು.

ವಿ ಎಸ್ ಪಿ ಎಂಟರ್ಟೈನ್ಮೆಂಟ್ ಪ್ರ.ಲಿ. ಮುಖ್ಯಸ್ಥರಾದ ನೀರಜ್ ಪ್ರಸಾದ್ ರವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ ಹಾಗೂ ಕಾರ್ಯಕ್ರಮದಿಂದ ಬರುವ ಹಣವನ್ನು ಚಾರಿಟಿಕಾಸ್’ಲ್ಲಿ ಕೂಡಿಸಿ ನೇತ್ರದಾನ ಖರ್ಚಿಗೆ ಬಳಕೆ ಮಾಡಲಾಗುತ್ತದೆ ಎಂದರು.

ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸೀಸನ್-5 ನ ಸ್ಪರ್ಧಿಗಳಾಗಿದ್ದ ನಿವೇದಿತಾ ಗೌಡ, ದಿವಾಕರ್ ಹಾಗೂ ಧನಂಜಯ್ ರವರು ಭಾಗವಹಿಸಲಿದ್ದಾರೆ.

NO COMMENTS

LEAVE A REPLY