ಮೈಸೂರಿನಲ್ಲಿ ಬೀಕರ ಅಪಘಾತ: ನಾಲ್ವರ ಸಾವು..!

ಮೈಸೂರಿನಲ್ಲಿ ಬೀಕರ ಅಪಘಾತ: ನಾಲ್ವರ ಸಾವು..!

268
0
SHARE

ಮೈಸೂರು(ಮಾ‌.14.2018): ಮೈಸೂರಿನ ಟಿ.ನರಸೀಪುರ ರಸ್ತೆಯ ದೊಡ್ಡಆಲದ ಮರದ ಬಳಿ 2 ಖಾಸಗಿ ಬಸ್ ಹಾಗೂ 1 ಕಾರಿನ ಮಧ್ಯೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಖಾಸಗಿ ಬಸ್ ಚಾಲಕರ ಓವರ್ ಟೇಕ್ ಜಗಳದಿಂದ ಈ ಅಪಘಾತ..

ಈ ದುರ್ಘಟನೆ ಸಂಭವಿಸಲು ಖಾಸಗಿ ಬಸ್ ಚಾಲಕರ ಓವರ್ ಟೇಕ್ ಕಿತ್ತಾಟವೇ ಕಾರಣವಾಗಿದೆ. ಹೌದು ಎರಡು ಖಾಸಗಿ ಬಸ್ ಚಾಲಕರ ನಡುವೆ ಓವರ್ ಟೇಕ್ ವಿಚಾರದಲ್ಲಿ ಮೈಸೂರಿನ ಚಿಕ್ಕಳ್ಳಿ ಗ್ರಾಮದ ಬಳಿ ಗಲಾಟೆ ನಡೆದಿದ್ದು,  ಪ್ರಯಾಣಿಕರು ಇಬ್ಬರು ಚಾಲಕರಿಗೂ ಬೈದಿದ್ದಾರೆ.

ಆ ನಂತರ ಒಂದು ಖಾಸಗಿ ಬಸ್ ಮುಂದೆ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿದೆ. ಈ ವೇಳೆ ಇನ್ನೊಂದು ಖಾಸಗಿ ಬಸ್ ಕಾರನ್ನು  ಓವರ್ ಟೇಕ್  ಮಾಡಲು ಮುಂಧಾಗಿದ್ದು, ಈ ಸಂದರ್ಭದಲ್ಲಿ ಮುಂದಿನ ಖಾಸಗಿ ಬಸ್ ಚಾಲಕ ಬ್ರೇಕ್ ಹಾಕಿದ್ದಾರೆ. ಈ ವೇಳೆ ಕಾರು ಎರಡು ಖಾಸಗಿ ಬಸ್ ಗಳ ನಡುವೆ ಸಿಲುಕಿ ಈ  ಅವಘಡ ಸಂಭವಿಸಿದೆ.

NO COMMENTS

LEAVE A REPLY