ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ನಿರ್ಬಂಧ..!

ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ನಿರ್ಬಂಧ..!

190
0
SHARE

ಬೆಂಗಳೂರು(ಮಾ.13.2018): ಬೇಸಿಗೆ ಕಳೆಯುವವರೆಗೂ ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ನಿರ್ಬಂಧ ಹೇರಿರುವುದಾಗಿ ವನ್ಯಜೀವಿ ವಿಭಾಗ ಪ್ರಧಾನ  ಅರಣ್ಯ ಸಂರಕ್ಷಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 10ಕ್ಕೆ ತಮಿಳುನಾಡು ಅರಣ್ಯ ಪ್ರದೇಶದಲ್ಲಿ ದುರಂತ ಹಿನ್ನೆಲೆಯಲ್ಲಿ ಅಪಾಯ ತಪ್ಪಿಸುವುದಕ್ಕೆ ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಕ್ರಮ ಈ ಕ್ರಮ ಕೈಗೊಂಡಿದೆ.

ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ಚಾರಣಕ್ಕಾಗಿ ಯಾವುದೇ ರೀತಿ ಅನುಮತಿ ಸಿಗುವುದಿಲ್ಲ. ತಮಿಳುನಾಡು ಅರಣ್ಯ ಪ್ರದೇಶ ದುರಂತದಲ್ಲಿ ಹಲವರ ಸಾವು ಹಿನ್ನೆಲೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿಯೂ ಬೇಸಿಗೆಯಲ್ಲಿ ಚಾರಣ ನಿರ್ಬಂಧ ಹೇರಲಾಗಿದೆ.

ರಕ್ಷಿತಾರಣ್ಯ, ಇತರೆ ಸೂಕ್ಷ್ಮ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದ್ದು, ಬೇಸಿಗೆ ಕಾಲ ಪೂರ್ಣ, ಒಂದೆರಡು ಮಳೆ ಬೀಳುವವರೆಗು ಸಹ ಬ್ಯಾನ್ ಮುಂದುವರಿಯಲಿದೆ. ಪ್ರಮುಖವಾಗಿ ಬಂಡೀಪುರ,ನಾಗರಹೊಳೆ,ಭದ್ರಾ, ಮತ್ತು ಬಿ.ಆರ್.ಟಿ., ಕಾಳಿಹುಲಿ ಸಂರಕ್ಷಿತ ಪ್ರದೇಶವೂ ಸೇರಿ ರಾಜ್ಯದ ಅರಣ್ಯಗಳಿಗೆ ಈ ಆದೇಶ ಅನ್ವಯವಾಗಲಿದೆ.

NO COMMENTS

LEAVE A REPLY