ಗಂಗೋತ್ರಿಯಲ್ಲಿ ಟಿಬೆಟಿಯನ್ನರ ಕಲರವ 

ಗಂಗೋತ್ರಿಯಲ್ಲಿ ಟಿಬೆಟಿಯನ್ನರ ಕಲರವ 

173
0
SHARE

ಗಂಗೋತ್ರಿಯಲ್ಲಿ ಟಿಬೆಟಿಯನ್ನರ ಕಲರವ 

ವರದಿ: ಚೈತ್ರ ಗೌಡ ಹಸನ

ಕಳೆದ ಎರಡು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಟಿಬೆಟಿಯನ್ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಹಾಗೆಯೇ ಇಂದು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಟಿಬೆಟಿಯನ್ ಮತ್ತು ಭಾರತದ ನಡುವಿನ ಸ್ನೇಹ ಸೌಹಾರ್ದತೆಯ ಸಂಬಂಧವನ್ನು ಪ್ರದರ್ಶಿಸಲಾಹಿತು .

1950 ರಲ್ಲಿ ಚೀನಾದ 40 ಸಾವಿರ ಮಾವೋ ಸೈನಿಕರು ಟಿಬೆಟ್ ಮೇಲೆ ಆಕ್ರಮಣ ನಡೆಸಿದರು. ಈ ಸಂದರ್ಭದಲ್ಲಿ ಟಿಬೆಟ್ ಸ್ವಾತಂತ್ರ್ಯವನ್ನು ಕಳೆದುಕೊಂಡಿತು, ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ 17 ಅಂಶದ ಒಪ್ಪಂದಗಳಿಗೆ ಟಿಬೆಟ್ ಸಹಿ ಮಾಡಿತ್ತು ಅಲ್ಲಿಂದ ಇಲ್ಲಿಯವರೆಗೂ ಟಿಬೆಟ್ ಚೀನಾದ ಆಡಳಿತಕ್ಕೆ ಒಳಪಟ್ಟಿದೆ  , ಇದೀಗ ಟಿಬೆಟ್ ಹನ್ನೊಂದು ವಲಯಗಳಲ್ಲಿ ಸ್ವಾತಂತ್ರ್ಯವನ್ನು ಕೊಡುವಂತೆ ಚೀನಾಗೆ ಬೇಡಿಕೆಯನ್ನು  ಇಟ್ಟಿದೆ ಧರ್ಮ ಸ್ವಾತಂತ್ರ್ಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ರಕ್ಷಣೆ, ಪರಿಸರ ಸಂರಕ್ಷ ಣೆ, ಆರ್ಥಿಕಾಭಿವೃದ್ಧಿ ಮತ್ತು ವ್ಯಾಪಾರ ಸಂಪನ್ಮೂಲ ಬಳಕೆ, ಆಮದು ಮತ್ತು ರಫ್ತು, ವಲಸೆಯ ನೀತಿ ನಿಯಮಗಳಲ್ಲಿ ಸಡಿಲಿಕೆ ಹೀಗೆ ಹನ್ನೊಂದು ವಲಯಗಳಲ್ಲಿ ಸ್ವಾತಂತ್ರ್ಯವನ್ನು ಕೊಡುವಂತೆ ಬೇಡಿಕೆಯನ್ನಿಟ್ಟಿದೆ  ಇದರ ಪೂರ್ಣ ಮಾಹಿತಿಯನ್ನು ಇಂದು ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು .

ಮತ್ತೊಂದೆಡೆ ಟಿಬೆಟಿಯನ್ನ ಧಾರ್ಮಿಕ ಗುರು ದಲೈಲಾಮ ರವರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ, ಬ್ರಿಟಿಷ್, ಕೆನಾಡ, ಜರ್ಮನ್, ಮಂಗೋಲಿಯನ್, ಫ್ರೆಂಚ್, ಬೆಲ್ಜಿಯಂ, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಇನ್ನಿತರ ದೇಶಗಳ ರಾಜಕೀಯ ಮತ್ತು ಧಾರ್ಮಿಕ ನಾಯಕರೊಡನೆ ದಲೈಲಾಮಾ ಹೊಂದಿದ್ದಂತಹ ಸ್ನೇಹ ಸಂಬಂಧಗಳನ್ನು ಛಾಯಾಚಿತ್ರದ ಮೂಲಕ ಪ್ರದರ್ಶಿಸಲಾಯಿತು. ಟಿಬೆಟ್ ರಾಷ್ಟ್ರದ ೬ ಮಿಲಿಯನ್ ಜನಸಂಖ್ಯೆ , ಉದ್ಯೊಗ ,ಸಂಸ್ಕೃತಿ ನೀತಿನಿಯಮಗಳು, ಶಾಂತಿ, ಬೌದ್ಧ ಧರ್ಮ, ಹಾಗೂ ಅವರ ವೇಷ ಭೂಷಣಗಳನ್ನು ಪ್ರದರ್ಶನಕ್ಕೆ ಇರಿಸಲಾಯಿತು ,ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಟಿಬೆಟಿಯನ್ನ 300  ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದಲ್ಲಿ ಟಿಬೆಟಿಯನ್ ಸಂಸ್ಕೃತಿಯನ್ನು ಪ್ರದರ್ಶಿಸಿದರು. ಶಾಂತಿಯ ಸಂಕೇತವಾದ ಭೌತ ಧರ್ಮವನ್ನು ಪಾಲಿಸುವ ಟಿಬೆಟಿಯನ್ನರ ಸಾಂಸ್ಕೃತಿಕ ಪ್ರದರ್ಶನ ಇಂದು ಗಂಗೋತ್ರಿಗೆ ಹೊಸ ಮೆರುಗು ನೀಡಿತ್ತು .

 

NO COMMENTS

LEAVE A REPLY