ಮಾರ್ಚ್ 13 ಅಂತರ್ ಕಾಲೇಜ್ ಮಟ್ಟದ ಆಯಿನಾ ಸಮಾರಂಭ ಸಿದ್ದತೆ ಯಲ್ಲಿ ಸಂತ...

ಮಾರ್ಚ್ 13 ಅಂತರ್ ಕಾಲೇಜ್ ಮಟ್ಟದ ಆಯಿನಾ ಸಮಾರಂಭ ಸಿದ್ದತೆ ಯಲ್ಲಿ ಸಂತ ಫಿಲೋಮಿನಾ ಕಾಲೇಜು.

222
0
SHARE

 

ನಗರದ ಸಂತ ಫಿಲೋಮಿನಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವತಿಯಿಂದ ಪ್ರತಿವರ್ಷ ಆಚರಿಸಿಕೊಂಡು ಬರುತಿರುವ *ಆಯಿನಾ* ಅಂತರ್ ಕಾಲೇಜು ಮಟ್ಟದ ಸಮಾರಂಭವನ್ನು ಮಾರ್ಚ್ 13 ರಂದು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ಮತ್ತು ಸ್ಕ್ರೀಫ್ಟ್ ಬರವಣಿಗೆ (ಹಸ್ತಪ್ರತಿ) ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಉದ್ಘಾಟನೆಯನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ *ಎಂ. ಕೃಷ್ಣೆ ಗೌಡರು* ನೆರವೇರಿಸಲಿದ್ದಾರೆ . ಹಾಗೂ ವಿದ್ಯಾರ್ಥಿಗಳೊಂದಿಗೆ ಟಿವಿ9 ವಾಹಿನಿಯ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ *ಅಮರ್ ಪ್ರಸಾದ್*ರವರು ಸಂವಾದಿಸಲಿದ್ದಾರೆ.
ಸ್ಪರ್ದೆಗಳಾದ ಸ್ಪಾಟ್ ಛಾಯಾಗ್ರಹಣ ದ ಆಯ್ಕೆ , ಮಾತನಾಡೂ(ಪಿಕ್ ಅಂಡ್ ಸ್ಪೀಕ್) ಅಣುಕು ಪತ್ರಿಕಾ ಗೋಷ್ಠಿ (ಮೋಕ್ ಪ್ರೆಸ್) ಹುಚ್ಚು ಜಾಹೀರಾತು (ಮ್ಯಾಂಡ್ ಆಯ್ಡ್ಸ್) ಗಳನ್ನು ಏರ್ಪಡಿಸಲಾಗಿದೆ.ಎಲ್ಲಾ ಕಾಲೇಜಿನ ವಿಧ್ಯಾರ್ಥಿಗಳಿಗೆ ಆಹ್ವಾನಿಸಲಾಗಿದೆ ಬೆಳಗ್ಗೆ ಸಮಯ 9 ಗಂಟೆಗೆ ತಮ್ಮ ಹಾಜರಾತಿಯನ್ನು ತಲಾ 100 ರೂಪಾಯಿ ಅನ್ನು ನೀಡಿ ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸತ್ಯ:8861441608
ಮಹೇಶ್: 7204604606

ವರದಿ: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY