ರಾಜ್ಯಕ್ಕೆ ಮೋದಿ 100 ಅಲ್ಲ 200 ಬಾರಿ ಬಂದ್ರೂ ನಾವೇ ಅಧಿಕಾರಕ್ಕೆ ಬರೋದು : ಸಿಎಂ

ರಾಜ್ಯಕ್ಕೆ ಮೋದಿ 100 ಅಲ್ಲ 200 ಬಾರಿ ಬಂದ್ರೂ ನಾವೇ ಅಧಿಕಾರಕ್ಕೆ ಬರೋದು : ಸಿಎಂ

215
0
SHARE

ಮೈಸೂರು(ಮಾ.9.2018):ರಾಜ್ಯಕ್ಕೆ ಪ್ರಧಾನ ಮಂತ್ರಿ ಮೋದಿ 100 ಅಲ್ಲ 200 ಬಾರಿ ಬಂದ್ರೂ ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲಿಂಗಾಯತ ಪ್ರತ್ಯೆಕ ಧರ್ಮ ಚರ್ಚೆ ಪ್ರಾರಂಭವಾಯಿತು, ಪೂರ್ಣ ಆಗಿಲ್ಲ. ತೀರ್ಮಾನವೂ ಆಗಿಲ್ಲ. ಯಾವುದೇ ಡಿಫ್ರೆನ್ಸ್ ಇಲ್ಲ ಎಂದರು.

ಪ್ರತ್ಯೇಕ ನಾಡಧ್ವಜ ಕುರಿತು ಪ್ರತಿಕ್ರಿಯಿಸಿದ ಅವರು, ನಾಡ ಧ್ವಜವನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ, ಅವರು ಆಯ್ಕೆ ಮಾಡಬೇಕು. ಕನ್ನಡ ಧ್ವಜಕ್ಕೂ ನಾಡ ಧ್ವಜಕ್ಕೂ ವ್ಯತ್ಯಾಸ ಇದೆ. ಕನ್ನಡ ಹೋರಾಟಗಾರರು ಅದನ್ನು ಬಳಕೆ ಮಾಡಿಕೊಳ್ಳಬಹುದು. ಕೇವಲ ವಾಟಾಳ್ ನಾಗರಾಜ್ ಮಾತ್ರ ವಿರೋಧ ಮಾಡಿದ್ದಾರೆ, ಬೇರೆಲ್ಲ ಒಪ್ಪಿದ್ದಾರೆ. ನಾಡ ಧ್ವಜವನ್ನು ರಾಷ್ಟ್ರ ಧ್ವಜದ ಮಾದರಿಯಲ್ಲೇ ಬಳಸಬೇಕು ಎಂದು ತಿಳಿಸಿದರು.

ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸರ್ಕಾರಕ್ಕೆ ಮುಜುಗರ ಏನೂ ಆಗಿಲ್ಲ. ಸ್ಟೇ ಕೊಟ್ರೆ ಏನ್ ಮಾಡಕಾಗುತ್ತೆ. ಕೇಂದ್ರ ಸ್ಟೇ ಕೊಟ್ಟಿದೆ, ಅದನ್ನ ನಾವು ವೆಕೇಟ್ ಮಾಡಿಸುತ್ತೇವೆ. ಇದು ಆಡಳಿತಾತ್ಮಕ ವಿಚಾರ. ಈ ಬಗ್ಗೆ ಬೀದಿಯಲ್ಲಿ ಮಾತನಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕಾವೇರಿ ನಿರ್ವಹಣಾ ಮಂಡಳಿ ಸಂಬಂಧ ಲೀಗಲ್ ಟೀಂ ಸಲಹೆಯಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಯಾರ ಬೆಂಬಲವೂ ಬೇಡ. ಮೂರನ್ನೂ ನಾವೇ ಗೆಲ್ಲುವಾಗ ಯಾರ ಬೆಂಬಲ ಬೇಕಾ. ಜೆಡಿಎಸ್ ಕುಮಾರ ಪರ್ವ ಮಾಡಲಿ. ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಅವಕಾಶ ಇದೆ ಎಂದು ಟಾಂಗ್ ನೀಡಿದರು.

NO COMMENTS

LEAVE A REPLY