ಮಹಿಳೆಯರ ಕುರಿತಾದ ವಿಹಂಗಮ ನೋಟ: ಗಂಗೋತ್ರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟ ಮಾನಿನಿಯರ ದಿನಾಚರಣೆ..

ಮಹಿಳೆಯರ ಕುರಿತಾದ ವಿಹಂಗಮ ನೋಟ: ಗಂಗೋತ್ರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟ ಮಾನಿನಿಯರ ದಿನಾಚರಣೆ..

355
0
SHARE

ಮೈಸೂರು(ಮಾ.08.2018):ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಮಹಿಳೆಯರ ಸಮಕಾಲೀನ ಅಗತ್ಯಗಳು ಕುರಿತಂತೆ ಒಂದು ದಿನದ ವಿಚಾರ ಸಂಕಿರಣವನ್ನು ರಾಣಿಬಹುದ್ದೂರ್ ಸಭಾಂಗಣದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಮಹಿಳಾ ಅಧ್ಯಾಪಕರ ವೇದಿಕೆಯು ಮೈತ್ರಿ ಮಹಿಳಾ ಅಧ್ಯಾಪಕರ ಸಂಘದ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಸಮಾಜದಲ್ಲಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿಲ್ಲ, ಪ್ರತಿದಿನವೂ ಮಹಿಳೆಯರ ಸಮಸ್ಯೆ ಉದ್ಭವಿಸುತ್ತಿವೆ. ಮಹಿಳಾ ಸಂಘಟನೆಗಳು ಹುಟ್ಟಿವೆ ಎಂದರೆ ಅಸುರಕ್ಷಿತ ಭಾವನೆ ಕಾರಣ. ಲೈಂಗಿಕ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇವೆ ಎಂದು ಆತಂಕ ವ್ಯಕ್ತಪಡಿಸಿ, ಸಂವಿಧಾನದಲ್ಲಿ ಮಹಿಳೆಯರಿಗಾಗಿಯೆ ಹಲವು ಶಾಸನಬದ್ಧ ಕಾನೂನುಗಳಿದ್ದು, ಪುರುಷರಿಗೆ ಸಮಾನವಾಗಿ ಬೆಳೆಯಬೇಕು ಎಂದು ಮೈಸೂರು ವಿವಿ ಪ್ರಭಾರ ಕುಲಪತಿಗಳಾದ ಪ್ರೋ.ಸಿ ಬಸವರಾಜುರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಭಾಷಣದಲ್ಲಿ ಮಾತನಾಡಿದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್ ಉಷಾರಾಣಿರವರು, ಮಹಿಳೆಯರು ಹೆಚ್ಚಾಗಿ ಮಡಿವಂತಿಕೆಯ ಕಟ್ಟಳೆಯಲ್ಲಿ ಬದುಕುವುದನ್ನು ಮೀರಿ ಬೆಳೆಯಬೇಕಾಗಿದೆ. ಮಾಧ್ಯಮದಲ್ಲಿ ಮಹಿಳೆಯರ ಕುರಿತಾಗಿ ಸಕಾರಾತ್ಮಕ ದೋರಣೆ ವ್ಯಕ್ತಪಡಿಸಬೇಕು. ಪಂಚಾಯತಿ ವ್ಯವಸ್ಥೆಯಲ್ಲಿ ಮಹಿಳೆಯರು ಅಭಿವೃದ್ಧಿ ಕೆಲಸವನ್ನು ಮಾಡಿದ್ದರು, ಮಾಧ್ಯಮ ನಕಾರಾತ್ಮಕ ವಿಷಯಗಳನ್ನು ಮಾತ್ರವೇ ಹೆಚ್ಚಾಗಿ ತೋರಿಸುತ್ತಿವೆ. ಹಾಗೂ ಪ್ರಜ್ಞವಂತಾ ಮಹಿಳಾ ಧನಿಯು ಪತ್ರಿಕೆಯಲ್ಲಿ ಹೆಚ್ಚಾಗಿ ಕಂಡುಬರಬೇಕಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮಹಿಳೆಯರ ಮತದಾನದ ಸಂವಿಧಾನಿಕ ಹಕ್ಕುಗಳು ಕುರಿತಂತೆ ವಕೀಲರು ಹಾಗೂ ನಟಿ ಮಾಳ್ವಿಕಾ ಅವಿನಾಶ್ ರವರು ವಿಚಾರ ಸಂಕಿರಣ ಮಂಡಿಸಿ ಜಾತಿ ,ಜನಾಂಗ ವೋಟ್ ಬ್ಯಾಂಕ್ ಆಗುತ್ತದೆ,ಮಹಿಳೆಯರು ಮಾತ್ರ ಏಕೆ ವೋಟ್ ಬ್ಯಾಂಕ್ ಆಗುವುದಿಲ್ಲ ಎಂದು ಪ್ರಶ್ನಿಸಿದರು. ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ನಾನು ಕೂಡ ಹಲವಾರು ಬಾರಿ ಎದುರಿಸಿದ್ದೇನೆ. ಮಹಿಳೆಯರು ಇದರ ಬಗ್ಗೆ ಧನಿ ಎತ್ತಿ ಬದುಕು ರೂಪಿಸಿಕೊಳ್ಳಬೇಕು. ರಾಜಕೀಯವಾಗಿ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕ್ಯಾಪ್ಟನ್ ಪ್ರತಿಭಾ ತಿವಾರಿ ಮಹಿಳಾ ಸಂರಕ್ಷಣಾ ಸಾಧ್ಯತೆಗಳು, ಛಾಯನಂಜಪ್ಪ ಮಹಿಳಾ ಉದ್ಯಮಶೀಲತೆ ಕುರಿತು ವಿಚಾರ ಸಂಕಿರಣ ಮಂಡಿಸಿದರು.

ಮೈಸೂರು ವಿವಿ ಕುಲಸಚಿವರಾದ ಡಿ.ಭಾರತಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಪ್ರೋ. ಬಿ ಪಿ ಮಹೇಶ್ ಚಂದ್ರ ಗುರುಗಳು, ಡಾ. ಎಂ. ಎಸ್ ಸಪ್ನ ಹಾಗೂ ಡಾ.ಎಂ ಮಮತಾ  ಮತ್ತು ಮಾನಸ ಗಂಗೋತ್ರಿಯ ವಿವಿಧ ವಿಭಾಗದ ಪ್ರಾಧ್ಯಾಪಕರುಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ – ಅಕ್ಷಿತಾ ಕೆ.ಡಿ

NO COMMENTS

LEAVE A REPLY