ಲೋಕಾಯುಕ್ತರಿಗೆ ಚೂರಿ ಇರಿತ: ಸಿದ್ದರಾಮಯ್ಯ ಆಡಳಿತ ವಿರುದ್ಧ ಆಕ್ರೋಶ

ಲೋಕಾಯುಕ್ತರಿಗೆ ಚೂರಿ ಇರಿತ: ಸಿದ್ದರಾಮಯ್ಯ ಆಡಳಿತ ವಿರುದ್ಧ ಆಕ್ರೋಶ

191
0
SHARE

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ತೇಜರಾಜ್‌ ಶರ್ಮಾ ಎಂಬಾತ ಚಾಕುವಿನಿಂದ ಇರಿದ ಪ್ರಕರಣಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನ್ಯಾಯಮೂರ್ತಿಗಳಿಗೆ ಭದ್ರತೆ ಇಲ್ಲವೆಂದ ಮೇಲೆ ಜನ ಸಾಮಾನ್ಯರ ಪಾಡೇನು ಎಂಬುದು ಬಹುತೇಕ ಎಲ್ಲರ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಸರಕಾರದ ವಿರುದ್ಧ ರಾಜಕೀಯರ ನಾಯಕರು, ಗಣ್ಯರು, ಸಾಮಾನ್ಯ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್‌ ಕೂಡ ಘಟನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಕರ್ನಾಟಕ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಸಂಸದ ರಾಜೀವ್‌ ಚಂದ್ರಶೇಖರ್ ಕೂಡ ರಾಜ್ಯದ ಆಡಳಿತವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಲೋಕಾಯುಕ್ತ ನ್ಯಾಯಮೂರ್ತಿ ಶೀಘ್ರ ಗುಣಮುಖರಾಗಲೆಂದೂ ಪ್ರಾರ್ಥಿಸಿದ್ದಾರೆ.

NO COMMENTS

LEAVE A REPLY