2018ರ ನೀಟ್ ಪರೀಕ್ಷೆಗೆ ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

2018ರ ನೀಟ್ ಪರೀಕ್ಷೆಗೆ ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

188
0
SHARE

ನವದೆಹಲಿ(ಮಾ. 7.2018): 2018ರ ನೀಟ್ ಪರೀಕ್ಷೆಗೆ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಧಾರ್ ಬದಲಿಗೆ ಬೇರೆ ಯಾವುದೇ ಗುರುತಿನ ಚೀಟಿಗಳನ್ನು ದಾಖಲೆಗಾಗಿ ಬಳಸಬಹುದು ಎಂದು ನ್ಯಾಯಾಲಯ ಹೇಳಿದೆ.

2018ರ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬಾರದು ಎಂದು ಕೋರಿ ಗುಜರಾತ್ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ವಿಚಾರಣೆ ವೇಳೆ ಕೇಂದ್ರ ಸರಕಾರ ನ್ಯಾಯಾಲಯಕ್ಕೆ ನೀಟ್ 2018ರ ಪರೀಕ್ಷೆಗೆ ಆಧಾರ್ ಕಾರ್ಡ್ ಬೇಕಾಗಿಲ್ಲ ಎಂದು ಹೇಳಿದೆ. “ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಹೊಂದಿರಲೇಬೇಕು ಎಂದು ನಾವು ಸಿಬಿಎಸ್ಇಗೆ ಸೂಚಿಸಿಲ್ಲ,” ಎಂಬುದಾಗಿ ಕೇಂದ್ರ ಪ್ರತಿಕ್ರಿಯೆ ನೀಡಿದೆ.

NO COMMENTS

LEAVE A REPLY