ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ..!

ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ..!

220
0
SHARE

ಬೆಂಗಳೂರು(ಮಾ.07.2018): ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕುವಿನಿಂದ ಇರಿಯಲಾಗಿದ್ದು, ನ್ಯಾಯಮೂರ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಲೋಕಾಯುಕ್ತ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ವಿಚಾರಣೆಗೆ ಬಂದಿದ್ದ ತೇಜಸ್ ಶರ್ಮಾ ಚಾಕುವಿನಿಂದ ಲೋಕಾಯುಕ್ತರನ್ನು ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿರಯವ ವಿಶ್ವನಾಥ್ ಶೆಟ್ಟಿ ಅವರನ್ನು ಹತ್ತಿರದ ಮಲ್ಯ ಆಸ್ಫತ್ರಗೆ ದಾಖಲಿಸಲಾಗಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೇಜಸ್ ಶರ್ಮಾ ಅವರನ್ನು ವಿಧಾನಸಭಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ತೇಜಸ್ ಶರ್ಮಾ ಈ ಕೃತ್ಯ ಎಸಗಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡ ಲೋಕಾಯುಕ್ತರಿಗೆ ಚಾಕು ಹಾಕುವುದು ಎಂದರೆ ಏನು..? ಅಯ್ಯೋ ರಾಮಾ, ನಾವು ಗೂಂಡಾ ರಾಜ್ಯದಲ್ಲಿ ಇದ್ದೀವಾ..? ಸರ್ಕಾರ ಮೊದಲೇ ಲೋಕಾಯುಕ್ತ ಸಂಸ್ಥೆಯನ್ನು ಸಾಯಿಸಿದೆ. ಕಾನೂನು ಸುವ್ಯವಸ್ಥೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

NO COMMENTS

LEAVE A REPLY