ತ್ರಿಪುರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ.

ತ್ರಿಪುರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ.

149
0
SHARE

ಅಗರ್ತಲಾ(ಮಾ.03.2018): ಆಡಳಿತ ವಿರೋಧಿ ಅಲೆ, ಚಾಣಾಕ್ಷತನದ ಪ್ರಾದೇಶಿಕ ಮೈತ್ರಿ, ಮಾತೃಸಂಘಟನೆ ಆರೆಸ್ಸೆಸ್‌ನ ಬಲದೊಂದಿಗೆ ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಧ್ವಜ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕೇವಲ ಐದು ವರ್ಷಗಳ ಹಿಂದೆ ಈಶಾನ್ಯ ಭಾರತದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ ಎಂಬುದು ಗಮನಾರ್ಹವಾದ ಅಂಶ.

ಮೂರು ರಾಜ್ಯಗಳ ಚುನಾವಣೆ ಫಲಿತಾಂಶಗಳು ಪ್ರಕಟವಾಗಿದ್ದು, ಎಡಪಕ್ಷದ ಭದ್ರಕೋಟೆಯೆನಿಸಿದ ತ್ರಿಪುರಾ ಬಿಜೆಪಿ ಮಡಿಲಿಗೆ ಬಿದ್ದಿದೆ. ನಾಗಾಲ್ಯಾಂಡ್‌ನಲ್ಲಿ ಪ್ರಾದೇಶಿಕ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್‌ (ಎನ್‌ಪಿಎಫ್‌) ಅನ್ನು ಕೆಳಕ್ಕಿಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲದೆ ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್‌ ಅನ್ನು ಸಂಪೂರ್ಣವಾಗಿ ಬದಿಗೆ ಸರಿಸಿದೆ. ಅಲ್ಲಿ ಕಾಂಗ್ರೆಸ್‌ ಗಳಿಕೆ ಶೂನ್ಯವಾಗಿದೆ.

NO COMMENTS

LEAVE A REPLY