ಬಿಗ್’ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

ಬಿಗ್’ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

186
0
SHARE

 

ಬಿಗ್’ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

ಬೆಂಗಳೂರು: ಬಾರ್ ಸಪ್ಲೈಯರ್ ಒಬ್ಬರ ಅಪಹರಣ ಪ್ರಕರಣದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು ಬಂಧಿಸಲಾಗಿದೆ.

ಬಾರ್ ಸಪ್ಲೈಯರ್​​ ಗಿರೀಶ್ ಎಂಬಾತನನ್ನು ಕಿಡ್ನಾಪ್ ಮಾಡಿ, ಚಿತ್ರ ಹಿಂಸೆ ನೀಡಿದಷ್ಟೇ ಅಲ್ಲದೆ ಪಾಯಿಂಟ್ ಬ್ಲಾಂಕ್​ನಲ್ಲಿ ಗನ್ ಇಟ್ಟು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಹಿನ್ನಲೆ ಸುನಾಮಿ ಕಿಟ್ಟಿ ವಿರುದ್ಧ ಗಿರೀಶ್ ದೂರು ದಾಖಲಿಸಿದ್ದರು. ಇದೀಗ ಜ್ಞಾನಭಾರತಿ ಪೊಲೀಸರು ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಸೇರಿದಂತೆ, ಸ್ನೇಹಿತರಾದ ಯೋಗೇಂದ್ರ ಮತ್ತು ಅರ್ಜುನ್​ಎಂಬುವವರನ್ನು ಬಂಧಿಸಿದ್ದು,  ಕಿಟ್ಟಿ ಸ್ನೇಹಿತ ಸುನಿಲ್​ಗಾಗಿ ಶೋಧ ಮುಂದುವರೆಸಿದ್ದಾರೆ.

NO COMMENTS

LEAVE A REPLY