ಮಾನ, ಮರ್ಯಾದೆ ಇಲ್ಲದ ಮಿನಿಸ್ಟರ್ ಗಳು

ಮಾನ, ಮರ್ಯಾದೆ ಇಲ್ಲದ ಮಿನಿಸ್ಟರ್ ಗಳು

199
0
SHARE

 

ಮಾನ, ಮರ್ಯಾದೆ ಇಲ್ಲದ ಮಿನಿಸ್ಟರ್ ಗಳು

ಟೀ ಶಾಪ್ ಗಳಲ್ಲಿ ಸಹ ಉತ್ತಮವಾದ ಭಾಷೆಯನ್ನು ಬಳಸುತ್ತಾರೆ ಅಂತ ಕಿತ್ತೋದ್ ಭಾಷೆ ಬಳಸ್ತಾರೆ ನಮ್ಮ ಮಿನಿಸ್ಟರ್ ಗಳು. ನಾಚಿಕೆ, ಮಾನ, ಮರ್ಯಾದೆ ಇಲ್ಲ ನಮ್ಮನ್ನು ಆಳುತ್ತಿರುವವರಿಗೆ ಎಂದು ಹಿರಿಯ ಪತ್ರಕರ್ತರಾದ ಕೃಷ್ಣ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿವಿ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ‘ಕಳೆದ ಐದು ವರ್ಷಗಳ ಕರ್ನಾಟಕದ ಸಾರ್ವಜನಿಕ ಜೀವನದ ಮೌಲ್ಯಮಾಪನ’ ಕುರಿತಾದ ಚರ್ಚಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಯುವಜನತೆ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನವಮಾಧ್ಯಮಗಳನ್ನು ಸದುಪಯೋಗಪಡಿಸಿಕೊಂಡು ರಾಜಕೀಯ ಜ್ಞಾನ ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರ ಮುಕ್ತ ರಾಜಕೀಯ ಪಕ್ಷ ಯಾವುದೂ ಇಲ್ಲ ನಾವು ಮತ ಚಲಾಯಿಸುವಾಗ ಯೋಚನೆ ಮಾಡಿ ಮತ ಚಲಾಯಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು .


ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗ, ನಿರಂತರ ಫೌಂಡೇಷನ್, ಸಮಾಜಮುಖಿ ಮಾಸಪತ್ರಿಕೆ, ಫೋಕಸ್ ಟಿವಿ ಕನ್ನಡ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಐದು ವರ್ಷದ ಸರ್ಕಾರದ ಆಡಳಿತಗಳು, ಭ್ರಷ್ಟಾಚಾರ, ಮೈಸೂರು ವಿವಿ ಸಮಸ್ಯೆಗಳು, ಕರ್ನಾಟಕದ ಮಾದರಿ, ಸಾಮಾಜಿಕ ಜೀವನದ ಕುರಿತ ಚರ್ಚೆ ನಡೆಸಲಾಯಿತು.
ಮೈಸೂರು ವಿವಿ ಪ್ರತಿಭಾನ್ವಿತರ ನಂದನವನ ಆಗುವ ಬದಲು ಸ್ಮಶಾನವನ ಆಗುತ್ತಿದೆ. ಮುಕ್ತ ವಿಶ್ವವಿದ್ಯಾಲಯಗಳು ಗುಪ್ತ ವಿಶ್ವವಿದ್ಯಾಲಯಗಳಾಗಿವೆ. ಪತ್ರಕರ್ತರು ನಿಜವಾದ ವಿರೋಧ ಪಕ್ಷದವರು ಆದರೆ ಬಾಡಿಗೆಯ ಬುದ್ಧಿಜೀವಿಗಳಂತೆ ಕೆಲಸ ಮಾಡುತ್ತಿದ್ದಾರೆ. ಪ್ರಾಧ್ಯಾಪಕರುಗಳು ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದನ್ನು ಬಿಟ್ಟು ವಿಧಾನಸೌಧದ ಸುತ್ತ ಸುತ್ತುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ಚಿಂತಕರು ಮತ್ತು ಅಂಕಣಕಾರರಾದ ಕೆ.ಪಿ.ಸುರೇಶ್ ಅವರು ಮಾತನಾಡಿ, ದುಷ್ಟರ ಕೆಟ್ಟತನಕ್ಕೆ ದುಃಖಿಸುವ ಬದಲು ಸಜ್ಜನರ ಮೌನಕ್ಕೆ ದುಃಖ ವ್ಯಕ್ತಪಡಿಸಬೇಕಾಗಿದೆ ವಿದ್ಯಾರ್ಥಿಗಳು ಮೊದಲು ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಹಿರಿಯ ಪತ್ರಕರ್ತರಾದ ಪೃಥ್ವಿದತ್ತ ಚಂದ್ರಶೋಭಿ, ನಿವೃತ್ತ ಪ್ರಾಧ್ಯಾಪಕರು ಹಾಗೂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್‌ ಡೆಲಪ್ಮೆಂಟ್ ಸ್ಟಡೀಸ್ ನ ಮಾಜಿ ನಿರ್ದೇಶಕರಾದ ಪ್ರೊ.ವಿ.ಕೆ.ನಟರಾಜ್, ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಜಿ. ಟಿ.ರಾಮಚಂದ್ರಪ್ಪ, ನಿರಂತರ ಫೌಂಡೇಶನ್ನ ಪ್ರಸಾದ್ ಕುಂದೂರು, ಸುಗುಣ ಎಂಎಂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ : ಚೈತ್ರ ಗೌಡ ಹಾಸನ್

NO COMMENTS

LEAVE A REPLY